ಮಂಗಳೂರು:– ದೇಶದ ಸಂಪತ್ತಿನಲ್ಲಿ ದೇಶದ್ರೋಹಿಗಳಿಗೆ ಅಧಿಕಾರವಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಭಾರತದಲ್ಲೇ ಇದ್ದು, ದೇಶಕ್ಕೆ ದ್ರೋಹ ಬಗೆಯುವ ಮಾನಸಿಕತೆ ಹೊಂದಿರುವವರಿಗೆ ಈ ದೇಶದ ಸಂಪತ್ತಿನಲ್ಲಿ ಅಧಿಕಾರ ಇಲ್ಲ. ಅದೇನಿದ್ದರೂ ಭಾರತೀಯ ಮಾನಸಿಕತೆಯವರಿಗೆ ಸೇರಿದ್ದು’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.
ಹುಬ್ಬಳ್ಳಿಯಲ್ಲಿ ಈಚೆಗೆ ನಡೆದ ದಕ್ಷಿಣ ಭಾರತದ ಮುಸ್ಲಿಂ ಧರ್ಮಗುರುಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಪ್ರತಿಕ್ರಿಯಿಸಿದರು.
ದೇಶದ ಸಂಪತ್ತು ಮುಸ್ಲಿಮರಿಗೆ ಸೇರಿದ್ದು ಎನ್ನುವ ಬದಲು ಭಾರತೀಯರಿಗೆ ಅಥವಾ ಬಡವರಿಗೆ ಸೇರಿದ್ದು ಎಂದು ಸಿದ್ದರಾಮಯ್ಯ ಹೇಳಬಹುದಿತ್ತು. ಓಲೈಕೆ ರಾಜಕಾರಣಕ್ಕಾಗಿ ನೀಡಿರುವ ಈ ಹೇಳಿಕೆ ಅಪಾಯಕಾರಿ. ಇದನ್ನು ಖಂಡಿಸುತ್ತೇನೆ. ಇಂತಹ ಮಾನಸಿಕತೆಯೇ ದೇಶ ವಿಭಜನೆಗೆ ಕಾರಣವಾಗಿದೆ ಎನ್ನುವುದನ್ನೇ ಕಾಂಗ್ರೆಸ್ ಮರೆಯಬಾರದು. ಇದು ಕೋಮುವಾದಿ ರಾಜಕಾರಣದ ಪ್ರತ್ಯಕ್ಷ ದರ್ಶನ. ಕಾಂಗ್ರೆಸ್ ಪಕ್ಷವೇ ನಿಜವಾದ ಕೋಮುವಾದಿ ಪಕ್ಷ’ ಎಂದರು.
‘ಮುಸ್ಲಿಂ ಧರ್ಮಗುರುಗಳ ಸಮ್ಮೇಳನದಲ್ಲಿ ಐಎಸ್ಐ ಏಜೆಂಟ್ಗಳೂ ಭಾಗವಹಿಸಿದ್ದರು’ ಎಂದು ಬಿಜೆಪಿಯ ಶಾಸಕ ಬಸನಗೌಡ ಯತ್ನಾಳ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ರವಿ, ‘ಯತ್ನಾಳ್ ಅವರು ಸುಮ್ಮನೆ ಆರೋಪ ಮಾಡುತ್ತಾರೆ ಎನ್ನಿಸುವುದಿಲ್ಲ. ಈ ಬಗ್ಗೆ ಸಿಬಿಐ ಅಥವಾ ಎನ್ಐಎ ವಿಶೇಷ ಗಮನ ಹರಿಸಬೇಕು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಪೂರ್ವಾಪರ ತನಿಖೆ ಆಗಬೇಕು’ ಎಂದರು.