ಮಂಡ್ಯ : ದ್ವೇಷ ರಾಜಕಾಣಕ್ಕೆ ಬುನಾದಿಯೇ ಕಾಂಗ್ರೆಸ್ ಪಕ್ಷ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಇಂದು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಟಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ಸೇವನೆಯಿಂದಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯ ವಿಚಾರಿಸಿದರು.
ಇದೇ ವೇಳೆ ಮಾತನಾಡಿದ ಅವರು, ಸ್ವತಂತ್ರ ಬಂದಾಗಿನಿಂದ ಯಾರು ಕೂಡ ದ್ವೇಷ ರಾಜಕಾರಣಕ್ಕೆ ಮುಂದಾಗಿರ್ಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ದ್ವೇಷ ರಾಜಕಾರಣ ಮಾಡ್ತಿದೆ. ನಮ್ಮ ತಂದೆ ಶ್ರಮಪಟ್ಟು ದುಡಿದ ದುಡ್ಡಿನಿಂದ ಕೇತಗಾನಹಳ್ಳಿಯಲ್ಲಿ ಜಮೀನು ಖರೀದಿಸಿದ್ದಾರೆ. ಕಳೆದ ಹತ್ತು ವರ್ಷದಿಂದ ಇದು ವಿವಾದವಾಗಿದೆ. ಈ ವಿವಾದ ನ್ಯಾಯಾಲಯದಲ್ಲಿದೆ ಯಾರೇ ಆದರೂ ಕಾನೂನಿಗೆ ಗೌರವ ನೀಡಬೇಕು. ಕಾನೂನಿನ ಅಡಿಯಲ್ಲೆ ಸಮಸ್ಯೆ ಬಗೆಹರಿಸಿಕೊಳ್ಳುತ್ತೀವಿ, ಯಾರು ಯಾರನ್ನ ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋದನ್ನ ನೋಡಿದ್ದೇವೆ. ಸಿಟಿ ರವಿಯವರನ್ನ ಯಾವ ರೀತಿ ನಡೆಸಿಕೊಂಡ್ರು ಅನ್ನೋದನ್ನ ನೋಡಿದ್ದೇವೆ. ದ್ವೇಷ ರಾಜಕಾರಣಕ್ಕೆ ಜೆಡಿಎಸ್ ಸೊಪ್ಪು ಹಾಕಲ್ಲ ಎಂದರು.
ಇನ್ನೂ ಮಂಡ್ಯದ ಜನ್ರು ಛೆತ್ರಿಗಳು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಳೆದ ಚುನಾವಣೆಯಲ್ಲಿ ಪೆನ್ನು ಪೇಪರ್ ಕೊಡಿ ಅಂತ ಬೇಡಿಕೊಂಡ್ರು. ಮಂಡ್ಯ ಜನ್ರು 5 ಜನರನ್ನ ಆಯ್ಕೆ ಮಾಡಿ ಶಕ್ತಿ ಕೊಟ್ಟಿದ್ದಾರೆ. ಯಾರೋ ಒಬ್ಬ ಶಾಸಕ ಛತ್ರಿ ಅಂದ್ರೆ ಅತ್ಯಂತ ಬುದ್ದಿವಂತರು, ಪ್ರಭುದ್ದರು, ಸೂಕ್ತ ನಿರ್ಧಾರ ಕೈಗೊಳ್ಳಲು ಸಾಮರ್ಥ್ಯ ಇರೋ ಜನ ಎಂದಿದ್ದಾರೆ ಎಂದು ತಿರುಗೇಟು ನೀಡಿದರು.
ರಾಮನಗರ ಜಿಲ್ಲೆಯ ಹೆಸರನ್ನು ನಾವು ಬದಲಾವಣೆ ಮಾಡುತ್ತೇವೆ: ಡಿಕೆ ಶಿವಕುಮಾರ್
ರಾಮನಗರ ಹೆಸ್ರು ಬದಲಾವಣೆ ವಿಚಾರವಾಗಿ ಮಾತನಾಡಿ ಹೆಸರು ಬದಲಾದ ತಕ್ಷಣ ರಾಮನಗರ ಅಭಿವೃದ್ಧಿ ಆಗಿಬಿಡಲ್ಲ. ಮುಂದಿನ ತಿಂಗಳು ಕರೆಂಟ್ ಬಿಲ್ ಜಾಸ್ತಿ ಮಾಡ್ತಿದ್ದಾರೆ. ಬೆಲೆ ಏರಿಕೆ ಎಲ್ಲಿಗೆ ತಂದು ನಿಲ್ಲಿಸಿದ್ದಾರೆ.
ಸ್ವತಂತ್ರ ಬಂದಾಗಿನಿಂದ 5 ಲಕ್ಷ ಸಾಲ ಇತ್ತು ಈಗ ಅದನ್ನ 7 ವರೆ ಲಕ್ಷಕ್ಕೆ ಏರಿಕೆ ಮಾಡಿದ್ದಾರೆ.
ಎರಡೇ ವರ್ಷದಲ್ಲಿ ಈ ಲೆವೆಲ್ಗೆ ಸಾಲ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನ ಬುದ್ದಿ ಕಲಿಸಲಿದ್ದಾರೆ ಎಂದರು.