ಬೆಂಗಳೂರು: ಡಿಕೆಶಿ ಅವರನ್ನ ಟಾರ್ಗೆಟ್ ಮಾಡಿ ಮೂಲೆ ಗುಂಪು ಮಾಡುವ ಕೆಲಸ ಕಾಂಗ್ರೆಸ್ನಲ್ಲಿ ಆಗುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಿಕೆಶಿ ಅಮಿತ್ ಶಾ ಜೊತೆ ರಾಜಕೀಯ ವೇದಿಕೆ ಹಂಚಿಕೊಳ್ಳಲಿಲ್ಲ.
Harbhajan Singh: ಪ್ರಖ್ಯಾತ ನಟಿಯೊಂದಿಗೆ ಶುಭಮನ್ ಗಿಲ್ ಮದುವೆ: ಹೊಸ ಬಾಂಬ್ ಸಿಡಿಸಿದ ಹರ್ಭಜನ್ ಸಿಂಗ್!
ರಾಜಕೀಯೇತರ ವೇದಿಕೆಯಲ್ಲಿ ಅಮಿತ್ ಶಾ ಜೊತೆ ಪಾಲ್ಗೊಂಡಿದ್ದರು. ಸದ್ಗುರು ಆಹ್ವಾನ ಮೇರೆಗೆ ಡಿಕೆಶಿಯವರು ಅಲ್ಲಿಗೆ ಹೋಗಿದ್ದಾರೆ. ಅದಕ್ಕೆ ಕಾಂಗ್ರೆಸ್ನಲ್ಲಿ ಆಕ್ಷೇಪ ಬರುತ್ತಿರುವುದು ಸರಿಯಲ್ಲ ಎಂದರು.
ಡಿಕೆಶಿ ಕಾಂಗ್ರೆಸ್ ಅಧ್ಯಕ್ಷರು, ಆದರೆ ಅಮಿತ್ ಶಾ ಬಿಜೆಪಿ ಅಧ್ಯಕ್ಷರಲ್ಲ. ಡಿಕೆಶಿಯವರನ್ನು ಕಾಂಗ್ರೆಸ್ನ ಒಳಗೇ ಟಾರ್ಗೆಟ್ ಮಾಡಲಾಗುತ್ತಿದೆ. ಅವರನ್ನ ಟಾರ್ಗೆಟ್ ಮಾಡಿ ಮೂಲೆ ಗುಂಪು ಮಾಡುವ ಕೆಲಸ ಕಾಂಗ್ರೆಸ್ನಲ್ಲಿ ಆಗುತ್ತಿದೆ ಎಂದು ಹೇಳಿದರು.