ಬೆಳಗಾವಿ: ಕಾಂಗ್ರೆಸ್ಗೆ ಮತಾಂತರ ನಿಷೇಧ ವಿಧೇಯಕ ವಿರೋಧ ಮಾಡುವ ನೈತಿಕ ಅಧಿಕಾರ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರಲ್ಲಿ ಟಿ.ಬಿ.ಜಯಚಂದ್ರ ಬಿಲ್ ತಯಾರು ಮಾಡಿದ್ದಾರೆ. ಹಿಂದೂಗಳನ್ನ ಮತಾಂತರ ಮಾಡುವ ಷಡ್ಯಂತ್ರ ಮಾಡಿದ್ದಾರೆ. ವಿದೇಶದಿಂದ ಇದಕ್ಕೆ ಹಣ ಬರುತ್ತೆ. ಈ ಹಿಂದೆ ಮಾಜಿ ಸಿಎಂ ಸಿದ್ದು ಕಡತಕ್ಕೆ ಸಹಿ ಹಾಕಿದ್ದಾರೆ. ಇದು ಅವರೇ ತಂದಿರುವ ಕೂಸು.
ಇದು ಬಟಾಬಯಲಾಗಿದೆ. ಅವರಿಗೆ ಇದರಿಂದ ಮುಖಭಂಗವಾಗಿದೆ. ಮುಸ್ಲಿಮರ ಸಭೆಗೆ ಚಾಂಪಿಯನ್ ರೀತಿ ಹೋಗ್ತಿದ್ರು. ಇವತ್ತು ಅವರು ಅಪಹಾಸ್ಯಕ್ಕೀಡಾಗಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಬೇಕು. ಸುಮ್ಮನೆ ಪ್ರತಿಭಟನೆ ಮಾಡ್ತಾರೆ. ನಿಮಗ್ಯಾಕೆ ಈ ಬಿಲ್ನಿಂದ ಭಯ. ಇವತ್ತು ಸಿದ್ದರಾಮಯ್ಯ ಕಕ್ಕಾಬಿಕ್ಕಿಯಾಗಿಬಿಟ್ರು. ಇದು ಕಾಂಗ್ರೆಸ್ನ ಡೋಂಗಿ ಬಣ್ಣ. ಮತಾಂತರ ನಿಷೇಧ ವಿಧೇಯಕ ಅವರೇ ತಂದಿರುವ ಕೂಸು. ನಾವು ಅವರ ಕೂಸಿಗೆ ಟಚ್ ಅಪ್ ಕೊಟ್ಟಿದ್ದೇವೆ ಎಂದರು
