ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರಕ್ಕೆ ಮುಸ್ಲಿಮರನ್ನು ಓಲೈಸುವುದನ್ನು ಬಿಟ್ಟರೆ ಏನು ಇಲ್ಲ ಎಂದು ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಮುಸ್ಲಿಮರನ್ನು ಓಲೈಸುವುದನ್ನು ಬಿಟ್ಟರೆ ಏನು ಇಲ್ಲ.
ಹಿಂದೂ ಸಮಾಜ ಅವರಿಗೆ ಮತ ಹಾಕಿದೆ ಎನ್ನುವ ಕಲ್ಪನೆ ಕೂಡ ಅವರಿಗಿಲ್ಲ. ಕೇವಲ ಮುಸ್ಲಿಂ ಸಮಾಜದ ಬಗ್ಗೆ ಕಾಳಜಿ ಇದೆ. ಮುಸ್ಲಿಂ ಸಮಾಜಕ್ಕೂ ಮಾಡಲಿ, ನಾವು ಬೇಡ ಅನ್ನಲ್ಲ, ಆದರೆ ಬೇರೆಯವರೂ ಇದಾರಲ್ಲ. ಎಲ್ಲಾ ದುಡ್ಡು ಮೀಸಲಾತಿ ಮುಸ್ಲಿಂ ಸಮಾಜಕ್ಕೆ ಕೊಡುವುದಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
Weight Loss: ತೂಕ ಇಳಿಕೆಗಾಗಿ ಉಪವಾಸ ಮಾಡ್ತಿರಾ..? ಹಾಗಾದ್ರೆ ಈ ಸಲಹೆಗಳ ಬಗ್ಗೆ ಗಮನಹರಿಸಿ!
ಇನ್ನೂ ಎಲ್ಲರ ಮೀಸಲಾತಿ ತೆಗೆದು ಮುಸ್ಲಿಮರಿಗೆ ಕೊಡಲು ಹೊರಟಿದ್ದಾರೆ. ಹಸಿ ಗೋಡೆ ಮೇಲೆ ಹಳ್ಳು ಒಗೆಯುವ ಕೆಲಸವನ್ನು ಸಿಎಂ ಮಾಡಿದ್ದಾರೆ. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸಿಮರು. ಮೀಸಲಾತಿ ಕೊಡುವುದು ಹೇಗೆ ಸಂವಿಧಾನ ವಿರೋಧಿಯಾಗುತ್ತೆ? ಈ ಬಗ್ಗೆ ಸಿಎಂ ಶ್ವೇತ ಪತ್ರ ಹೊರಡಿಸಲಿ ಎಂದಿದ್ದಾರೆ.