ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದಲ್ಲಿ ನೂತನವಾಗಿ ರಾಜ್ಯಾಧ್ಯಕ್ಷರಾಗಿ ನೇಮಕರಾದ ಎ.ಅಮೃತ್ ರಾಜ್ ರವರಿಗೆ ಮಹಾಲಕ್ಷ್ಮೀಲೇಔಟ್ ಕಛೇರಿ ಸಂಕೀರ್ಣ ಸಭಾಂಗಣದಲ್ಲಿ ಮಹಾಲಕ್ಷ್ಮೀಲೇಔಟ್ ವಲಯದ ಕಂದಾಯ ,ಇಂಜನಿಯರಿಂಗ್ ಮತ್ತು ಆರೋಗ್ಯ ವಿಭಾಗದ ಅಧಿಕಾರಿ ,ನೌಕರರಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು .
ಕಾರ್ಯಪಾಲಕ ಅಭಿಯಂತರಾದ ತಿಮ್ಮರಸು ,ರಂಗನಾಥ್ ,ಸಾಯಿ ಶಂಕರ್ ಕೆ.ಜಿ.ರವಿ,ಲಿಂಗರಾಜು ಮಂಜೇಗೌಡ,M.L.Aಮಂಜು ,ಸಂತೋಷ್ ಕುಮಾರ್ ನಾಯಕ್ ನರಸಿಂಹಮೂರ್ತಿ,ನರಸಿಂಹರವರು ಮತ್ತು ಲಲಿತಾ ,ಸುನಂದಮ್ಮ , ಮಂಜುಳಾರವರು ಹಾಗೂ ಅಧಿಕಾರಿ,ನೌಕರರು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾತನಾಡಿ ಅಧಿಕಾರಿ ಮತ್ತು ನೌಕರರ ಹಿತ ಕಾಯುವುದು ಸಂಘದ ಕೆಲಸ . ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ನೌಕರರಲ್ಲಿ ಕೆಲಸದಲ್ಲಿ ಒತ್ತಡ ವಿರುತ್ತದೆ ಮತ್ತು ಬಡ್ತಿ ,ವರ್ಗಾವಣೆ ಮತ್ತು ನೌಕರರ ಮೇಲೆ ದೌರ್ಜನ್ಯಗಳ ವಿರುದ್ದ ಹೋರಾಟಕ್ಕೆ ಸದಾ ಮುಂದೆ ಇದ್ದು ನ್ಯಾಯ ಒದಗಿಸುವ ಜವಾದ್ದರಿ ನಮ್ಮದು . ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಜನರ ಒಡನಾಡಿಯಾಗಿ ಕೆಲಸ ಮಾಡುತ್ತಿದೆ .
ಕೊಡಗಿನಲ್ಲಿ ಪ್ರವಾಹ ಬಂದಾಗ ಸಂಘದ ವತಿಯಿಂದ 100ಪೌರ ಕಾರ್ಮಿಕರ ಜೊತೆಯಲ್ಲಿ ಪ್ರವಾಹ ಸಂತಸ್ಥರ ನೆರವಿಗೆ ಹೋದೆವು . ಧರ್ಮಸ್ಥಳ ಕುಡಿಯುವ ನೀರಿನ ಅಭಾವವಾದಗ ಲಕ್ಷಾಂತರ ಲೀಟರ್ ನೀರನ್ನು ನೀಡಲಾಯಿತು ಮತ್ತು ಉತ್ತರ ಕರ್ನಾಟಕ ಬಾಗಲಕೋಟೆ ,ಬೆಳಗಾಂ ಜಿಲ್ಲೆ ಪ್ರವಾಹದಿಂದ ಜನರು ಸಂಕಷ್ಟದಲ್ಲಿ ಇದ್ದರು ಅವರಿಗೆ ಸಹಾಯಹಸ್ತ ನೀಡಲು ಆಹಾರ ಕಿಟ್ ಗಳನ್ನು ವಿತರಿಸಲಾಯಿತು .
ಕೊವಿಡ್ ಸಂದರ್ಭದಲ್ಲಿ 600ಕ್ಕೂ ಆನಾರೋಗ್ಯ ಪೀಡಿತರಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು. ಪರಿಸರ ಸ್ನೇಹಿ ಗಣೇಶ ಹಬ್ಬ ಮತ್ತು ಮತದಾನ ಬಗ್ಗೆ ಜನಜಾಗೃತಿ ಅಭಿಯಾನವನ್ನು ಪ್ರತಿ ವರ್ಷ ಹಮ್ಮಿಕೊಂಡು ಬರಲಾಗುತ್ತಿದೆ .ಜನರ ಮತ್ತು ನೌಕರರ ನಡುವೆ ಸಂಪರ್ಕ ಸೇತುವೆಯಾಗಿ ಸಂಘ ಕೆಲಸ ಮಾಡುತ್ತಿದೆ .
ಕೊವಿಡ್-19ಸಾಂಕ್ರಮಿಕ ರೋಗದಿಂದ ಬಿ.ಬಿ.ಎಂ.ಪಿ.30ಕ್ಕೂ ಹೆಚ್ಚು ನೌಕರರು ಮೃತಪಟ್ಟರು ನಮ್ಮ ಸಂಘದ ಸತತ ಹೋರಾಟದಿಂದ ಮೃತಪಟ್ಟ ಕುಟುಂಬಗಳಿಗೆ 30ಲಕ್ಷ ರೂಪಾಯಿ ಪರಿಹಾರ ವಿತರಿಸಲಾಯಿತು ಹಾಗೂ ಕೊವಿಡ್ ಸಂದರ್ಭದಲ್ಲಿ ಉಚಿತವಾಗಿ ಅಂಬುಲೆನ್ಸ್ ವಾಹನವನ್ನು ಸಾರ್ವಜನಿಕರ ಉಪಯೋಗಕ್ಕೆ ಸಂಘದ ವತಿಯಿಂದ ಬಿಡಲಯಿತು.
ಬಿ.ಬಿ.ಎಂ.ಪಿ.ಕೇಂದ್ರ ಕಛೇರಿ ಅವರಣದಲ್ಲಿ ಡಾ. ರಾಜ್ ಕುಮಾರ್ ರವರ ಪ್ರತಿಮೆ ಪಕ್ಕದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಪ್ರತಿಮೆಯನ್ನ ಜನವರಿ ತಿಂಗಳಲ್ಲಿ ಡಾ. ರಾಜ್ ಕುಟುಂಬದವರಿಂದ ಲೋಕರ್ಪಣೆ ಮಾಡಲಾಗುವುದು. 11ಮಹಾನಗರ ಪಾಲಿಕೆಗಳ ಒಕ್ಕೂಟದ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಸಂಘಗಳ ರಾಜ್ಯಾಧ್ಯಕ್ಷರಾಗಿ ನನ್ನನು ಆಯ್ಕೆ ಮಾಡಿದ ಎಲ್ಲ ಪಾಲಿಕೆ ಅಧಿಕಾರಿ ,ನೌಕರರಿಗೆ ಧನ್ಯವಾದಗಳು ಎಂದು ಹೇಳಿದರು.