ಅಹಮದಾಬಾದ್: ವಿಶ್ವಕಪ್ 2023ರ (World Cup 2023) ಫೈನಲ್ ಪಂದ್ಯಕ್ಕೆ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿದೆ. ನಗರದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮೂರನೇ ಏಕದಿನದ ವಿಶ್ವಕಪ್ಗಾಗಿ ಹೋರಾಟ ನಡೆಸಲಿದೆ. ಈ ನಡುವೆ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಪಂದ್ಯ ಪ್ರಾರಂಭಕ್ಕೂ ಗಂಟೆಗಳ ಮೊದಲು ಅಹಮದಾಬಾದ್ಗೆ ಆಗಮಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ, ಎಲ್ಲರೂ ಈ ದಿನಕ್ಕಾಗಿ ಕಾಯುತ್ತಿದ್ದಾರೆ. ನಾನು ಟೀಂ ಇಂಡಿಯಾಗೆ ಶುಭಾಶಯ ಹೇಳಲು ಬಂದಿದ್ದೇನೆ. ವಿಶ್ವಕಪ್ಗಾಗಿ ಹಣಾಹಣಿಯಲ್ಲಿರುವ ಭಾರತ ಟ್ರೋಫಿ ಎತ್ತಿಹಿಡಿಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ವಿಶ್ವಕಪ್ಗಾಗಿ ಹೋರಾಟ ನಡೆಸಲಿರುವ ಕ್ರಿಕೆಟಿಗರು ಈಗಾಗಲೇ ಸ್ಟೇಡಿಯಂಗೆ ಲಗ್ಗೆಯಿಟ್ಟಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯ ಪ್ರಾರಂಭವಾಗಲಿದೆ. ಮೋದಿ ಸ್ಟೇಡಿಯಂನೆಡೆಗೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳ ದಂಡು ಹೊರಟಿದೆ. ಭಾರತಕ್ಕೆ ಕಪ್ ಒಲಿದು ಬರಲಿ ಎಂದು ದೇಶಾದ್ಯಂತ ಎಲ್ಲೆಡೆ ಪೂಜೆ ಪುನಸ್ಕಾರಗಳು ನೆರವೇರಿಸಲಾಗುತ್ತಿದೆ