ನವದೆಹಲಿ: ಕಾಂಡೋಮ್ ಉದ್ಯಮ ಲಾಕ್‍ಡೌನ್ ನಡುವೆ ಭಾರೀ ಕುಸಿತ ಕಂಡಿದೆ. ಕಂಪನಿ ಕಾಂಡೋಮ್ ತಯಾರಿಕೆಯನ್ನು ಬಿಟ್ಟು ಹ್ಯಾಂಡ್ ಗ್ಲೌಸ್ ತಯಾರಿಕೆ ಯಲ್ಲಿ ತೊಡಗಿಸಿಕೊಳ್ಳುವವ ಮಟ್ಟಿಗೆ ಕಂಪನಿಗೆ ನಷ್ಟ ಉಂಟಾಗಿದೆ. ಕಾಂಡೋಮ್‍ಗಳಲ್ಲಿ ತಯಾರಿಸುವ ಮಲೇಷ್ಯಾ ಮೂಲದ ಕಂಪನಿಯು ಈಗ ಕಾಂಡೋಮ್ ಮಾರಾಟದಲ್ಲಿ ನಷ್ಟ ಉಂಟಾಗಿರುವುದರಿಂದ ವೈದ್ಯಕೀಯ ಹ್ಯಾಂಡ್ ಗ್ಲೌಸ್ ತಯಾರಿಕೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಜನರು ಮನೆಯಿಂದ ಆಚೆ ಬರ ದಂತೆ ವಿಶ್ವದಾದ್ಯಂತ ಲಾಕ್‍ಡೌನ್ ವಿಧಿಸಲಾಗಿತ್ತು.
ಲೈಂಗಿಕ ಕ್ರಿಯೆಯ ವೇಳೆ ಗರ್ಭ ನಿರೋಧಕ ಅಥವಾ ಕಾಂಡೋಮ್ ಬಳಸುವ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂದು ನಿಕ್ಕಿ ಏಷ್ಯಾ ವರದಿ ಮಾಡಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹೋಟೆಲ್‌ಗಳು ಮತ್ತು ಲೈಂಗಿಕ ಸ್ವಾಸ್ಥ್ಯ ಕೇಂದ್ರಗಳನ್ನು ಮುಚ್ಚುವುದು, ವಿವಿಧ ಸರ್ಕಾ ರಗಳು ಕಾಂಡೋಮ್ ಹ್ಯಾಂಡ್‌ಔಟ್ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿರುವುದು ಕರೇಕ್ಸ್‌ನ ಕಾಂಡೋಮ್‌ಗಳ ಮಾರಾಟದ ಕುಸಿತಕ್ಕೆ ಕಾರಣವಾಯಿತು ಎಂದು ಕರೇಕ್ಸ್ ಬಿಎಚ್ಡಿಯ ಮುಖ್ಯಸ್ಥ ಗೋಹ್ ಮಿಯಾಹ್ ಕಿಯಾಟ್ ಹೇಳಿದ್ದಾರೆ..
