ನಿಮಗೆಲ್ಲ ಗೊತ್ತಿರುವ ಹಾಗೆ ತುಳಸಿ ಒಂದು ಪೂಜನೀಯ ಸಸ್ಯ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಸಾವಿರಾರು ವರ್ಷಗಳಿಂದ ಆಯುರ್ವೇದ ಪದ್ಧತಿಯಲ್ಲಿ ನಮ್ಮ ಹಿರಿಯರು ಇದನ್ನು ಬಳಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ತುಳಸಿಯಲ್ಲಿ ಹಲವಾರು ವಿಧಗಳಿವೆ. ಅದರಲ್ಲಿ ರಾಮ ತುಳಸಿ ಮತ್ತು ಕೃಷ್ಣ ತುಳಸಿ ಸಾಮಾನ್ಯವಾಗಿ ಎಲ್ಲೆಡೆ ಕಂಡು ಬರುತ್ತದೆ. ನಮ್ಮ ಉತ್ತಮ ಆರೋಗ್ಯಕ್ಕೆ ಇವೆರಡರಲ್ಲಿ ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಇರುವ ಗೊಂದಲ.
2028 ರಲ್ಲಿ ನಮ್ಮ ಸರ್ಕಾರ ಬಂದರೆ 2000 ರಿಂದ 4000 ಕ್ಕೆ ಏರಿಕೆ ಮಾಡ್ತೇವೆ: ಶಾಸಕ ರಂಗನಾಥ್
ತುಳಸಿ ಬೀಜಗಳು ಹಾಗೂ ಚಿಯಾ ಬೀಜಗಳಲ್ಲಿ ಯಾವುದು ಬೆಸ್ಟ್ ಎಂದು ಅನೇಕರಿಗೆ ಸಂದೇಹ ಇರಬಹುದು. ಚಿಯಾ ಬೀಜಗಳು, ತುಳಸಿ ಬೀಜಗಳಲ್ಲಿ ಇವೆರಡೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇವುಗಳ ಪ್ರಯೋಜನಗಳಲ್ಲಿ ಕೆಲ ವ್ಯತ್ಯಾಸ ಇವೆ.
ವ್ಯತ್ಯಾಸ
ಚಿಯಾ ಬೀಜಗಳನ್ನು ಮೆಕ್ಸಿಕೋದಿಂದ ತರಿಸಲಾಗುತ್ತದೆ. ಇದು ನಮ್ಮ ದೇಶದ್ದಲ್ಲ. ಚಿಯಾ ಬೀಜಗಳಲ್ಲಿ ಇರುವುದೆಲ್ಲವೂ ತುಳಸಿ ಬೀಜಗಳಲ್ಲಿದೆ. ಭಾರತದಲ್ಲಿ ಇರುವವರು ಭಾರತದಲ್ಲಿನ ವಸ್ತುಗಳನ್ನು ಬಳಸಿದರೆ ಪ್ರಯೋಜನ ಜಾಸ್ತಿ ಅಲ್ಲವೇ! ಚಿಯಾ ಬೀಜಗಳಿಗಿಂತ ತುಳಸಿ ಬೀಜಗಳೇ ಬೆಸ್ಟ್! ಚಿಯಾ ಬೀಜಗಳಿಂದ ಉರಿಯೂತ ಆಗುತ್ತದೆ.
ಚಿಯಾ ಬೀಜಗಳು ಎಷ್ಟು ಪ್ರಯೋಜನಕಾರಿ?
ಚಿಯಾ ಬೀಜಗಳು ಒಮೆಗಾ-3 ಕೊಬ್ಬಿನಾಮ್ಲ, ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಹೊಂದಿವೆ. ತೂಕ ಇಳಿಕೆಗೆ ಚಿಯಾ ಬೀಜಗಳು ಒಳ್ಳೆಯದು. ಈ ಬೀಜಗಳು ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ, ಅಷ್ಟೇ ಅಲ್ಲದೆ ಹೊಟ್ಟೆಯಲ್ಲಿ ಜೆಲ್ ತರಹದ ವಸ್ತುವನ್ನು ರೂಪಿಸುವುದು. ಆಗ ನಮಗೆ ಹೊಟ್ಟೆ ತುಂಬಿದ ಭಾವನೆ ಬರುವುದು. ಇದರಿಂದ ಒಟ್ಟಾರೆ ಕ್ಯಾಲರಿ ಸೇವನೆ ಕಡಿಮೆ ಮಾಡುತ್ತದೆ. ಚಿಯಾ ಬೀಜಗಳು ಪ್ರತಿ ಔನ್ಸ್ಗೆ ಸುಮಾರು 4 ಗ್ರಾಂ ಪ್ರೋಟೀನ್ ಇದೆ. ಇದರಿಂದಲೇ ಕಡಿಮೆ ಹಸಿವಾಗುತ್ತದೆ. ಚಯಾಪಚಯ, ತೂಕ ಇಳಿಕೆಗೆ ಮುಖ್ಯ ಎಂದು ಹೇಳಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹೀಗಾಗಿ ಬೆಳಗ್ಗೆಯೇ ಈ ಬೀಜವನ್ನು ಸೇವಿಸಬೇಕು. ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ, ನೆಮ್ಮದಿಯ ನಿದ್ದೆ ಸಿಗುವುದು. ಈ ಬೀಜಗಳಲ್ಲಿ ಪೋಷಕಾಂಶಗಳು, ಔಷಧೀಯ ಗುಣಗಳು ಸಮೃದ್ಧವಾಗಿದ್ದು, ದೈಹಿಕ, ಮಾನಸಿಕ, ಲೈಂಗಿಕ ಆರೋಗ್ಯಕ್ಕೆ ಉಪಯುಕ್ತವಾಗಿವೆ. ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ. ಚಿಯಾ ಬೀಜಗಳು ತಾಯಿಯ ಹಾಲನ್ನು ಹೆಚ್ಚಿಸುತ್ತವೆ.
ತುಳಸಿ ಬೀಜಗಳ ಪ್ರಯೋಜನಗಳು
ತುಳಸಿ ಒಂದು ಸಸ್ಯ. ಇದನ್ನು ಕಾಮಕಸ್ತೂರಿ ಬೀಜಗಳು ಎಂದು ಕೂಡ ಕರೆಯಲಾಗುವುದು. ಹಿಂದುಗಳು ಈ ಗಿಡವನ್ನು ನಿತ್ಯವೂ ಪೂಜಿಸುತ್ತಾರೆ, ದೇವರಿಗೆ ಅರ್ಪಿಸುತ್ತಾರೆ. ಶೀತ,ಕೆಮ್ಮು ಇದ್ದರೆ ತುಳಸಿ ಎಲೆಗಳ ಕಷಾಯ ಕುಡಿಯುವುದು ಬೆಸ್ಟ್. ನಿತ್ಯವೂ ಬೆಳಿಗ್ಗೆ 4-5 ತುಳಸಿ ಎಲೆಗಳನ್ನು ತಿನ್ನಬೇಕು ಅಂತ ಹೇಳಲಾಗುತ್ತದೆ.
ತುಳಸಿ ಬೀಜಗಳಲ್ಲಿ ಫೈಬರ್, ಕಬ್ಬಿಣ, ಕ್ಯಾಲ್ಸಿಯಂ ಇದ್ದು. ಅವು ಉತ್ಕರ್ಷಣ ನಿರೋಧಕ ಸಹ ಹೊಂದಿವೆ. ಚಿಯಾ ಬೀಜಗಳಲ್ಲಿ ತುಳಸಿ ಬೀಜಗಳಿಗಿಂತ ಹೆಚ್ಚು ಒಮೆಗಾ-3 ಕೊಬ್ಬಿನಾಮ್ಲ ಇದೆ, ಹೆಚ್ಚು ಪ್ರೋಟೀನ್ ಒಳಗೊಂಡಿವೆ. ತುಳಸಿ ಬೀಜಗಳಲ್ಲಿ ಹೆಚ್ಚು ಫೈಬರ್ ಇರುತ್ತವೆ.
ತುಳಸಿಯ 1 ಚಮಚ ಬೀಜಗಳು (ಸುಮಾರು 13 ಗ್ರಾಂ) ದೇಹಕ್ಕೆ 15 % ಕ್ಯಾಲ್ಸಿಯಂ, 15% ಮೆಗ್ನೀಸಿಯಮ್, ಕಬ್ಬಿಣದ ಅಂಶದ 10% ಆರ್ಡಿಐ ಒದಗಿಸುತ್ತದೆ. ಸಬ್ಜಾ ಬೀಜಗಳು ಮಧುಮೇಹ ನಿಯಂತ್ರಿಸುತ್ತದೆ.ಮಲಬದ್ಧತೆ ಹಾಗೂ ಅಸಿಡಿಟಿಗೆ ಪರಿಹಾರ ಕೊಡುತ್ತವೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಬೀಜಗಳನ್ನು ಸೇವಿಸಿದರೆ, ವೇಗವಾಗಿ ತೂಕ ಇಳಿಕೆಯಾಗುತ್ತದೆ. ಸಬ್ಜಾ ಬೀಜಗಳು ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.