ಬೆಂಗಳೂರು: ಯಾವುದೇ ಪ್ರಕರಣದ ಆರೋಪಿಗಳನ್ನು ಬಂಧಿಸುವಾಗ ಕಾನೂನು ಬಾಹಿರವಾಗಿ ಕೈ ಕೋಳ ತೊಡಿಸುವ ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಬೇಡಿ ತೊಡಿಸುವ ಪೊಲೀಸರು ಕಡ್ಡಾಯ ವಾಗಿ ಬಾಡಿ ಕ್ಯಾಮರಾ ಧರಿಸಿರಬೇಕು ಎಂದು ಆದೇಶಿಸಿದೆ. ಬಂಧಿತರಾಗುವ ಸಾಮಾನ್ಯ ಕೈದಿಗಳಿಗೆ ಕೈಕೋಳ ಹಾಕ ಬಾರದು. ಅಗತ್ಯವಿದ್ದರಷ್ಟೇ ಮಾತ್ರ ಕೈಕೋಳ ಹಾಕಲು ಅವಕಾಶವಿದೆ. ಆ ಪ್ರಕ್ರಿಯೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿರುವ ನ್ಯಾಯಾಲಯ, ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧಿತ ವ್ಯಕ್ತಿಗೆ ಕಾನೂನು ಬಾಹಿರವಾಗಿ ಕೈಕೋಳ ಹಾಕಿದ್ದಕ್ಕಾಗಿ ಆತನಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
