ಬೆಂಗಳೂರು :ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಮಿಕ್ರಾನ್ & ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಇಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ಗೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಶಿಫಾರಸು ಪಟ್ಟಿ ಸಲ್ಲಿಸಲಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಜನವರಿ 7ನೇ ತಾರೀಕಿನವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇದರೊಂದಿಗೆ ಮತ್ತಷ್ಟು ಕಠಿಣ ರೂಲ್ಸ್ ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸಲಹಾ ಸಮಿತಿ ಶಿಫಾರಸು ಮಾಡಲಿದೆ.
ಇದರೊಂದಿದೆ ಹೋಟೆಲ್, ಪಬ್, ಬಾರ್ ಗಳಲ್ಲಿ 50;50 ಅನುಪಾತದ ರೂಲ್ಸ್ ಜಾರಿ ಮಾಡುವ ಬಗ್ಗೆ, ರಾಜ್ಯಾದ್ಯಂತ ಮಾಸ್ಕ್, ಸ್ಯಾನಿಟೈಸರ್, ಅಂತರದ ತ್ರಿಸೂತ್ರ ಜಾರಿಗೊಳಿಸುವುದು. ಸಿನಿಮಾ ವೀಕ್ಷಣೆ, ಮಾಲ್, ಮಲ್ಟಿಪ್ಲೆಕ್ಸ್ಗಳಲ್ಲಿ ಕಟ್ಟುನಿಟ್ಟಿನ, ಕಡ್ಡಾಯ ತ್ರಿಸೂತ್ರ ಪಾಲನೆ ಮಾಡುವುದು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ ಮುಂದುವರಿಸುವುದು. ಪ್ರತಿಭಟನೆ, ಮುಷ್ಕರ, ಸಮಾರಂಭಗಳಿಗೆ ಅವಕಾಶ ನೀಡದಿರುವುದು ಸೇರಿದಂತೆ ಹಲವು ಶಿಫಾರನ್ನಗಳನ್ನ ಸಲಹಾ ಸಮಿತಿ ನೀಡಲಿದೆ
