ವಿಜಯನಗರ: ಹಂಪಿಯ ಜನತಾ ಪ್ಲಾಟ್ ನಲ್ಲಿ ವಾಣಿಜ್ಯ ಚಟುವಟಿಕೆ ಬಂದ್ ಹಿನ್ನೆಲೆ ಬೆಂಗಳೂರಿನಲ್ಲಿ ಸಂತ್ರಸ್ತರು, ನಿವಾಸಿಗಳಿಂದ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಲಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿ, ಸಮಸ್ಯೆ ಆಲಿಕೆ ಮಾಡಲಿದ್ದಾರೆ. ಜನತಾ ಪ್ಲಾಟ್, ಆನೆಗೊಂದಿ ವಾಣಿಜ್ಯ ವಹಿವಾಟು ಬಂದ್ ಆಗಿ ತಿಂಗಳು ಕಳೆದಿವೆ.
ನ್ಯಾಯಾಲಯದ ಆದೇಶದಂತೆ ಬಂದ್ ಆಗಿವೆ. ಸ್ಥಳೀಯ ಶಾಸಕ ಗವಿಯಪ್ಪ, ಮಾಜಿ ಸಂಸದ ಉಗ್ರಪ್ಪ, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸೇರಿದಂತೆ ಸಂತ್ರಸ್ತರು, ನಿಯೋಗದ ತಂಡ ಮೂರು ಬಸ್ ಗಳಲ್ಲಿ ತೆರಳಿದ್ದಾರೆ.


