ಬೆಂಗಳೂರು :ಬೆಂಗಳೂರು ನಗರದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ವೀರ ವನಿತೆಯರ ಒಕ್ಕೂಟ ಪ್ರಾರಂಭಗೊಂಡಿದೆ. ಕ್ಷೇತ್ರದ ಚಂದ್ರನಗರ, ಕಮಲ ನಗರದಲ್ಲಿ ಈ ಒಕ್ಕೂಟ ಪ್ರಾರಂಭಗೊಂಡಿದ್ದು, ಕ್ಷೇತ್ರದ ಶಾಸಕ ಹಾಗೂ ಸಚಿವ ಕೆ ಗೋಪಾಲಯ್ಯ ಉದ್ಘಾಟನೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಕ್ಷೇತ್ರದಲ್ಲಿ ಆರಂಭಗೊಳ್ಳುವ ಮಹಿಳಾ ಒಕ್ಕೂಟಗಳಿಗೆ ತಲಾ 1 ಲಕ್ಷ ರೂ ಸಹಾಯಧನ ನೀಡಲಾಗುವುದು. ಕ್ಷೇತ್ರದ ಪ್ರತಿ 3 ರಿಂದ 4 ಬೂತ್ ಗಳಿಗೆ ಒಂದು ಮಹಿಳಾ ಒಕ್ಕೂಟ ಆರಂಭಿಸಿದರೆ ಪ್ರತಿವರ್ಷ ಯುಗಾದಿಗೆ ಮುಂಚೆ 1 ಲಕ್ಷ ರೂ ಸಹಾಯಧನ ನೀಡಲಾಗುವುದು. ಇದು ಇತರೆ ಕ್ಷೇತ್ರದ ಮಹಿಳೆಯರಿಗೆ ಮಾದರಿಯಾಗಬೇಕು ಎಂದು ಸಚಿವ ಗೋಪಾಲಯ್ಯ ಮಾಹಿತಿ ನೀಡಿದ್ದರು.
