ಕೊಬ್ಬರಿ ಎಣ್ಣೆ ನಮ್ಮ ತ್ವಚೆಯನ್ನು ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ ತ್ವಚೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡಾಗ ಇದು ಸೂರ್ಯನ ಅತಿನೇರಳಿ ಕಿರಣಗಳನ್ನು ಪ್ರತಿಫಲಿಸಿ ಇದರಿಂದ ಎದುರಾಗುವ ಹಾನಿಯಿಂದ ರಕ್ಷಿಸುತ್ತದೆ. ಅತಿನೇರಳೆ ಕಿರಣಗಳು (vuA ಮತ್ತು unB)ಕ್ರಮೇಣವಾಗಿ ಹೊರಚರ್ಮ ಮತ್ತು ಒಳಚರ್ಮವನ್ನು ಘಾಸಿಗೊಳಿಸುತ್ತವೆ ಹಾಗೂ ಚರ್ಮದಲ್ಲಿ ಕ್ಯಾನ್ಸರ್ ಎದುರಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲ, ಚರ್ಮದ ಸೆಳೆತವನ್ನು ಕುಗ್ಗಿಸಿ ನೆರಿಗೆ ಬೀಳಲು, ಬಿಸಿಲು ಬಿದ್ದ ಭಾಗದಲ್ಲಿ ಕಪ್ಪಗಾಗಲೂ ಕಾರಣವಾಗುತ್ತವೆ. ಒಂದು ಸಂಶೋಧನೆಯಲ್ಲಿ ಕೊಬ್ಬರಿ ಎಣ್ಣೆ ಸವರಿಕೊಂಡ ತ್ವಚೆ ಸೂರ್ಯನ ಅತಿನೇರಳೆ ಕಿರಣಗಳನ್ನು ಇಪ್ಪತ್ತು ಶೇಖಡಾದಷ್ಟು ತಡೆಯುತ್ತದೆ ಎಂದು ಕಂಡುಕೊಳ್ಳಲಾಗಿದೆ.
ಕೊಬ್ಬರಿ ಎಣ್ಣೆ ಉತ್ತಮ ಬ್ಯಾಕ್ಟೀರಿಯಾ ನಿವಾರಕವಾಗಿದೆ. ಅಂದ ಈ ಎಣ್ಣೆಯ ವಾತಾವರಣ ದಲ್ಲಿ ಕೆಲವಾರು ಬಗೆಯ ಬ್ಯಾಕ್ಟೀರಿಯಾಗಳು ಬದುಕಲಾರವು. ಬಾಯಿಯ ವಾಸನೆ, ದಂತಗಳ ಕೊಳೆಯುವಿಕೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳೂ ಕೊಬ್ಬರಿ ಎಣ್ಣೆಯ ವಾತಾವರಣದಲ್ಲಿ ಬದುಕಲಾರವು. ನಮ್ಮ ಹಲ್ಲುಗಳ ನಡುವಣ ಅತಿ ಕಿರಿಯ ಸಂಧುಗಳಲ್ಲಿಯೇ ಈ ಬ್ಯಾಕ್ಟೀರಿ ಯಾಗಳು ಹೆಚ್ಚಾಗಿ ಅಡಗಿ ಕುಳಿತಿರುತ್ತವೆ. ಇದೇ ಹಲ್ಲಿನ ಕೂಳೆ (ಅಂದರೆ ಹಲ್ಲುಗಳ ನಡುವಣ ಮತ್ತು ಹಲ್ಲು-ಒಸಡುಗಳ ನಡುವಣ ಕಿರಿದಾದ ಕುಳಿಗಳಲ್ಲಿ ಸಂಗ್ರಹವಾಗುವ ತಿಳಿ ಹಳದಿ ಬಣ್ಣದ ಹಿಟ್ಟಿನಂತಹ ಭಾಗ) ಬೆಳೆಯಲು ಕಾರಣ. ಹಲ್ಲುಜ್ಜುವಿಕೆ ಮತ್ತು ಮುಕ್ಕಳಿಸುವುದರಿಂದ ಹಲ್ಲುಗಳ ಹೊರಭಾಗದ ಕೂಳೆ ಸಾಕಷ್ಟು ತೊಳೆದು ಹೋದರೂ ಹಲ್ಲುಗಳ ನಡುವಣ ಸಂಧಿಯಲ್ಲಿರುವ ಕೂಳೆ ಮತ್ತು ಬ್ಯಾಕ್ಟೀರಿಯಗಳು ಹಾಗೇ ಉಳಿದುಕೊಳ್ಳುತ್ತವೆ. ಇದನ್ನು ನಿವಾರಿಸಲು ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆಯನ್ನು ಬಾಯಿಗೆ ಹಾಕಿ ಸುಮಾರು ಹತ್ತು ನಿಮಿಷಗಳವರೆಗೆ ಉಗಿಯದೇ ಸತತವಾಗಿ ಮುಕ್ಕಳಿಸುತ್ತಾ ಇರಬೇಕು. ಈ ಮೂಲಕ ಹಲ್ಲುಗಳ ನಡುವಣ ಭಾಗದ ಸಹಿತ ಎಲ್ಲಾ ಕಡೆಗಳಿಂದ ಬ್ಯಾಕ್ಟೀರಿಯಾಗಳು ಇಲ್ಲವಾಗುತ್ತವೆ

ಚರ್ಮದ ಉರಿತ ಮತ್ತು ಎಕ್ಸಿಮಾ ಗುಣಪಡಿಸುತ್ತದೆ
ಮೆದುಳಿನ ಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ
ತ್ವಚೆಗೆ ಉತ್ತಮ ತೇವಕಾರಕವಾಗಿದೆ
ಕೂದಲು ಉದುರುವುದನ್ನು ತಡೆಯುತ್ತದೆ
ಗಾಯಗಳನ್ನು ಮಾಗಿಸಲು ನೆರವಾಗುತ್ತದೆ
