ಬಿರು ಬೇಸಿಗೆಯಲ್ಲಿ ಕೃಷಿ ಉತ್ಪನ್ನಗಳ ದಿಢೀರ್ ಬೆಲೆ ಏರಿಕೆ ರೈತರಿಗೆ ಸಂತಸ ನೀಡಿದೆ. ಕೊಕ್ಕೊ ದರ ದಾಖಲೆಯತ್ತ ಮುನ್ನುಗ್ಗುತ್ತಿದೆ. ಕೆಜಿಗೆ 680 ರೂಪಾಯಿ ತಲುಪಿದೆ. ಕಾಫಿ ಮತ್ತು ರಬ್ಬರ್ ಬೆಲೆ ಕೂಡ ದಾಖಲೆಯ ಏರಿಕೆ ಕಂಡಿದೆ. ಇದಲ್ಲದೆ ಕಾಳುಮೆಣಸು, ರಬ್ಬರ್ ಬೆಲೆ ಏರಿಕೆಯಾಗುತ್ತಿದ್ದು,
ತೆಂಗು ಉತ್ಪನ್ನಗಳ ಮಾರುಕಟ್ಟೆ ಕೂಡ ಚೇತರಿಕೆ ಕಾಣುತ್ತಿದೆ. ಬಿರು ಬೇಸಿಗೆಯಲ್ಲೂ ಕೃಷಿ ಉತ್ಪನ್ನಗಳ ಬೆಲೆ ದಿಢೀರ್ ಏರಿಕೆಯಾಗಿದೆ. ಇದು ರೈತರಿಗೆ ಸಂತಸ ತಂದಿದೆ. ಕೊಕ್ಕೊ ದರ ದಾಖಲೆಯತ್ತ ಮುನ್ನುಗ್ಗುತ್ತಿದೆ. ಕಾಫಿ ಬೆಲೆ ಕೂಡ ದಾಖಲೆ ಮಾಡಿದೆ. ಕಾಳುಮೆಣಸು, ರಬ್ಬರ್ ಬೆಲೆ ಏರಿಕೆಯಾಗುತ್ತಿದೆ. ತೆಂಗು ಉತ್ಪನ್ನಗಳ ಮಾರುಕಟ್ಟೆ ಕೂಡ ಚೇತರಿಕೆ ಹಾದಿಯಲ್ಲಿದೆ.
ಕೊಕ್ಕೊ ದರ ದಾಖಲೆ ಏರಿಕೆ
ಕಳೆದ 40 ವರ್ಷಗಳಲ್ಲಿ ಮೊದಲ ಬಾರಿಗೆ ಕೊಕ್ಕೊ ಬೆಲೆ ಗಗನಮುಖಿಯಾಗಿದೆ. ಒಣ ಕೊಕ್ಕೊ ಬೆಲೆ ಹಿಂದಿನ ವರ್ಷದ ಗರಿಷ್ಠ ಬೆಲೆಗಿಂತ ಶೇ.172ರಷ್ಟು ಹೆಚ್ಚಿದ್ದು, ಪ್ರತಿ ಕೆಜಿಗೆ 680 ರೂ. ತಲುಪಿದೆ. ಕಳೆದ ವರ್ಷ ಗರಿಷ್ಠ 250 ರೂ. ದಾಖಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಕ್ಕೊ ಬೆಲೆ ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ. ಪಶ್ಚಿಮ ಆಫ್ರಿಕಾದ ಐವರಿ ಕೋಸ್ಟ್ನಲ್ಲಿ ಕೆಲವೇ ದಿನಗಳಲ್ಲಿ ಮಧ್ಯಂತರ ಕಟಾವು ನಡೆಯಲಿದೆ. ಇದರಿಂದ ಕೊಕ್ಕೊ ಕೊರತೆ ನೀಗಲಿದೆ ಎಂದು ಹೇಳಲಾಗುತ್ತಿದೆ. ಕೇರಳದಲ್ಲಿ ಕಟಾವಿನ ಸೀಸನ್ ಅಲ್ಲದಿದ್ದರೂ ಅಂತಾರಾಷ್ಟ್ರೀಯ ಬೆಲೆ ಏರಿಕೆ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.
ಕಾಳುಮೆಣಸು ಬೆಲೆ ಹೆಚ್ಚಳ
ಕಾಳುಮೆಣಸು ಮಾರುಕಟ್ಟೆಯಲ್ಲಿ ಮಾ.22ಧಿರಿಂದ ಆರಂಭವಾದ ಬೆಲೆ ಜಿಗಿತ ಮುಂದುವರಿದಿದೆ. ಪ್ರತಿ ಕೆಜಿ ಕಾಳು ಮೆಣಸು ಧಾರಣೆ 20 ರೂ. ಏರಿಕೆಯಾಗಿದೆ. ಕಳೆದ ವಾರದ ಆರಂಭದಲ್ಲಿ ಗಾರ್ಬಲ್ಡ್ ಕಾಳು ಮೆಣಸು ಬೆಲೆ 528 ರೂ. ಇತ್ತು. ವಾರಾಂತ್ಯದ ವೇಳೆ 548 ರೂ.ಗೆ ತಲುಪಿದೆ. ಅನ್ ಗಾರ್ಬಲ್ಡ್ ಬೆಲೆ 508 ರೂ.ನಿಂದ 528 ರೂ.ಗೆ ಏರಿಕೆಯಾಗಿದೆ.