ನಾಯಿ ಮತ್ತು ನಾಗರಹಾವಿನ ಮಧ್ಯೆ ಬಿರುಸಿನ ಫೈಟ್ ನಡೆದು ಕೊನೆಗೆ ಎರಡೂ ಪ್ರಾಣಿಗಳು ಸಾವನ್ನಪ್ಪಿದ ಘಟನೆ ಧಾರವಾಡದ ಹೊರವಲಯದ ಜಮೀನಿನಲ್ಲಿ ನಡೆದಿದಿದ್ದು, ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಫುಲ್ ವೈರಲಾಗಿದೆ.
ಧಾರವಾಡದ ಉಮೇಶ ಹಿರೇಮಠ ಎಂಬುವವರ ಹೊಲದಲ್ಲಿ ನಾಯಿ ಮತ್ತು ನಾಗರ ಹಾವಿನ ಕಾಳಗ ನಡೆದಿದ್ದು ಎಂದು ತಿಳಿದು ಬಂದಿದೆ. ಇನ್ನೂ ಎರಡು ಪ್ರಾಣಿಗಳ ಪೈಟ್ನ್ನು ಉಮೇಶ್ ಅವರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

ಸುಮಾರು 15 ನಿಮಿಷಗಳ ಕಾಲ ನಾಗರಹಾವು ಮತ್ತು ನಾಯಿ ಮಧ್ಯೆ ಕಾಳಗ ನಡೆದಿದೆ. ಈ ಕಾಳಗದಲ್ಲಿ ಹಾವು ನಾಯಿಗೆ ಕಚ್ಚಿತ್ತು. ನಾಯಿ ಕೂಡ ಹಾವನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿತ್ತು. ಇದರಿಂದ ಎರಡೂ ಪ್ರಾಣಿಗಳು ಕೆಲ ಸಮಯದ ನಂತರ ಪ್ರಾಣ ಬಿಟ್ಟಿವೆ.
