ಬೆಂಗಳೂರು: ನಗರದ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಚಾಲನೆ ಬಳಿಕ ಸಿಎಂ ಸಿದ್ದರಾಮಯ್ಯ ಹೊಸ ತಳಿಗಳ ಬಗ್ಗೆ ಮಾಹಿತಿ ಪಡೆದರು. ಸಿಎಂ ಸಿದ್ದರಾಮಯ್ಯ ಅವರಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸಾಥ್ ನೀಡಿದರು.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಕೃಷಿ ಮೇಳದಲ್ಲಿ ಅತ್ಯಂತ ಸಂತೋಷದಿಂದ ಭಾಗಿಯಾಗಿದ್ದೇನೆ. ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಕೃಷಿ ಮೇಳಕ್ಕೆ ಬರಲುದಕ್ಕೆ ಆಗಲ್ಲ ಅಂತ ಗುರವಾರ ಸಂಜೆ ಹೇಳಿದ್ದೆ. ಮೈಸೂರಿನ ಕಾರ್ಯಕ್ರಮಕ್ಕೆ ಮುಂದಕ್ಕೆ ಹಾಕಿಸಿ ಕೃಷಿಮೇಳಕ್ಕೆ ಬರುವಂತೆ ಕೃಷಿ ಸಚಿವರು ಒತ್ತಾಯಿಸಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವ ವಿದ್ಯಾಲಯ. ವಿಶ್ವವಿದ್ಯಾಲಯದಲ್ಲಿ ಏನೆಲ್ಲ ತಂತ್ರಜ್ಞಾನ ಇರುತ್ತೆ? ನೀರಿನ ಸಂರಕ್ಷಣೆ ಹೇಗೆ ? ಭೂಮಿ ಫಲವತತ್ತೆ ಕಾಪಾಡುವುದು ಹೇಗೆ ? ಎಂಬ ವಿಷಯವನ್ನ ತಿಳಿಸುವ ಕೆಲಸ ವಿಶ್ವವಿದ್ಯಾನಿಲಯ ಮಾಡುತ್ತೆ. ರಾಜ್ಯದ ಹೆಚ್ಚಿನ ಜನರು ಕೃಷಿ ಮೇಲೆ ಅವಲಂಬಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.