ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಹುತಾತ್ಮರ ಯೋಧ ಪ್ರಾಂಜಲ್ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಹುತಾತ್ಮರಾದ ಯೋಧ ಪ್ರಾಂಜಲ್ ಅವರ ಕುಟುಂಬದವರು ಆನೇಕಲ್ ತಾಲ್ಲೂಕಿನವರಾಗಿದ್ದು, ಜಿಲ್ಲಾಡಳಿತ ಸರಿಯಾದ ವ್ಯವಸ್ಥೆ ಮಾಡಿಲ್ಲವೆಂದು ಅಸಮಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಹುತಾತ್ಮ ಯೋಧನ ಮೃತದೇಹ ಇಂದು ಬೆಂಗಳೂರಿಗೆ ಬರಲಿದ್ದು, ಅನಿವಾರ್ಯ ಕಾರಣಗಳಿಂದ ನಾನು ಅಂತಿಮ ದರ್ಶನಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಗೃಹ ಸಚಿವ ಜಿ.ಪರೇಮಶ್ವರ್ ರವರು ಹುತಾತ್ಮ ಯೋಧರ ಅಂತಿಮ ದರ್ಶನಕ್ಕೆ ತೆರಳುತ್ತಿದ್ದಾರೆ ಎಂದರು.
Command & Control Centre: ಮಹಿಳೆಯರು, ಮಕ್ಕಳ ಸುರಕ್ಷತೆಗಾಗಿ ಬಹುಮಹಡಿ ಕಮಾಂಡ್ ಸೆಂಟರ್ ಉದ್ಗಾಟಿಸಿದ ಸಿಎಂ
ಸರ್ಕಾರದಿಂದ ಮೃತ ಯೋಧನ ಕುಟುಂಬಕ್ಕೆ ನೀಡಬೇಕಾಗಿರುವ ಪರಿಹಾರಗಳನ್ನು ನೀಡಲಾಗುವುದು. ಮೃತರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.