ಬೆಳಗಾವಿ: ಮುಖ್ಯಮಂತ್ರಿ ಆಗುತ್ತೇನೆ ಎಂದು ಯಾರು ಯಾರೋ ಹಗಲುಗನಸು ಕಾಣುತ್ತಿದ್ದಾರೆ, ಸೂಟು ಹೊಲೆಸಿಕೊಂಡವರೂ ಇದ್ದಾರೆ. ಆದರೆ ನಾನು ಇಂತಹ ಅಯೋಗ್ಯರ ಜೊತೆ ಸೇರುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ಧಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಿನ್ನೆ ಕೆ.ಎಸ್. ಈಶ್ವರಪ್ಪ, ಬಸನಗೌಡ ಯತ್ನಾಳ್ ಮತ್ತು ಮುರುಗೇಶ್ ನಿರಾಣಿ ನಡುವೆ ಸಂಧಾನ ಸಭೆ ನಡೆದಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ್,
ಖಾಸಗಿ ಹೋಟೆಲ್ ನಲ್ಲಿ ಎಲ್ಲರೂ ಇರೋದು ನಿಜ, ಮುಖ್ಯಮಂತ್ರಿ ಆಗುತ್ತೇನೆ ಎಂದು ಯಾರು ಯಾರೋ ಹಗಲುಗನಸು ಕಾಣುತ್ತಿದ್ದಾರೆ, ಸೂಟು ಹೊಲೆಸಿಕೊಂಡವರೂ ಇದ್ದಾರೆ. ದೊಡ್ಡವರಿಗೆ ಹಣ ಕೊಟ್ಟಿದ್ದೇನೆ, ಸಿಎಂ ಸ್ಥಾನ ರಿಸರ್ವ್ ಇಟ್ಟಿದ್ದೇನೆ ಅಂತಿದ್ದಾರೆ. ಆದರೆ ಇಲ್ಲಿ ಅವರ ಆಸೆಗಳು ಈಡೇರುವುದಿಲ್ಲ. ಇಲ್ಲಿ ಇರುವುದು ನರೇಂದ್ರ ಮೋದಿ . ಸಿಎಂ ಬದಲಾವಣೆ ಅನ್ನೋದು ಈಗ ಚರ್ಚೆಯಲ್ಲಿ ಇಲ್ಲ, ಇಂತಹ ಆಯೋಗ್ಯರನ್ನ ವರಿಷ್ಠರು ಸಿಎಂ ಮಾಡುವುದಿಲ್ಲ ಎಂದು ಯತ್ನಾಳ್ ತಿಳಿಸಿದ್ದಾರೆ.
