ಬೆಳಗಾವಿ:- ಮುಂದೆ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ರ ಸಿಡಿ ಬರಬಹುದು ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಯಡಿಯೂರಪ್ಪ ಮಗನ ಕುತಂತ್ರ ರಾಜಕಾರಣಕ್ಕೆ ಮತದಾರ ಬಲಿಯಾಗಲ್ಲ – ಕೆ ಎಸ್ ಈಶ್ವರಪ್ಪ!
ಈ ಸಂಬಂಧ ಮಾತನಾಡಿದ ಅವರು,ಪ್ರಜ್ವಲ್ ಕೇಸ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆಡಿಯೋ ಸುತ್ತು ಹಾಕಿ ಇದೆ. ನನ್ನ ಪ್ರಕರಣದಲ್ಲಿ ಡಿಕೆ ನೇರವಾಗಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳಿವೆ ಎಂದಿದ್ದಾರೆ.
ಮುಂದೆ ಸಿದ್ದರಾಮಯ್ಯ, ಪರಮೇಶ್ವರ್ ಸಿಡಿ ಬರಬಹುದು. ಮೊದಲಿನಿಂದ ಸಿಡಿ ಬಗ್ಗೆ ನಾನು ಹೇಳಿಕೊಂಡೇ ಬಂದಿದ್ದೆ. ಆಗ ಎಲ್ಲರೂ ನನ್ನ ಹೇಳಿಕೆ ನಿರ್ಲಕ್ಷ್ಯ ಮಾಡುತ್ತ ಬಂದರು. ಇವತ್ತು ಒಬ್ಬರಿಗೆ ಆಗಿದೆ, ಮುಂದೆ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಡಾ.ಪರಮೇಶ್ವರ್ ಅವರಿಗೂ ಬರಬಹುದು. ದಯವಿಟ್ಟು ಸಿಎಂ, ಗೃಹಸಚಿವರು ಇತಿಶ್ರೀ ಹಾಡಬೇಕು. ಮುಖ್ಯಮಂತ್ರಿಗಳು ಪಕ್ಷಾತೀತವಾಗಿ ಇತಿಶ್ರೀ ಹಾಡಬೇಕು. ಸಿಎಂ ಅವರಿಗೆ ಕೈ ಮುಗಿದು ಕೇಳಿಕೊಳ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಇನ್ನು ಇದೇ ವೇಳೆ ಪ್ರಜ್ವಲ್ ಕೇಸ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆಡಿಯೋ ಬಿಡುಗಡೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದರು. ಪ್ರಜ್ವಲ್ ಕೇಸ್ನಲ್ಲಿ ಡಿಸಿಎಂ ಡಿಕೆ ಆಡಿಯೋ ಸುತ್ತು ಹಾಕಿ ಇದೆ. ನನ್ನ ಪ್ರಕರಣದಲ್ಲಿ ಡಿಕೆ ನೇರವಾಗಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳಿವೆ. ನನ್ನ ಕೇಸ್ನಲ್ಲಿ ಡಿಕೆ ಮಾತನಾಡಿರುವ ಬಗ್ಗೆ ಸಾಕ್ಷ್ಯ ಇದೆ. ಡಿ.ಕೆ.ಶಿವಕುಮಾರ್ ಷಡ್ಯಂತ್ರ ಮಾಡಿರುವ ಬಗ್ಗೆ ಸಾಕ್ಷ್ಯಗಳು ಇವೆ. ನಾನು ಮಾಧ್ಯಮಗಳಿಗೆ ಈ ಸಾಕ್ಷ್ಯಗಳನ್ನು ಬಿಡುಗಡೆ ಮಾಡಲ್ಲ. ಪ್ರಕರಣವನ್ನು ಸಿಬಿಐಗೆ ನೀಡಿದ್ರೆ ಎಲ್ಲಾ ಸಾಕ್ಷ್ಯ ಕೊಡುತ್ತೇನೆ. ನನ್ನ ಪ್ರಕರಣ ಎಸ್ಐಟಿಗೆ ನೀಡಲಾಗಿದೆ, ಅದರ ಬಗ್ಗೆ ವಿಶ್ವಾಸವಿಲ್ಲ. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು. ‘ಸುಪ್ರೀಂ’ ಹಾಲಿ ನ್ಯಾಯಮೂರ್ತಿ ಮೇಲುಸ್ತುವಾರಿಯಲ್ಲಿ ತನಿಖೆ ಆಗಬೇಕು ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)