ಬೆಂಗಳೂರು: ಓಮಿಕ್ರಾನ್ ನಿಯಂತ್ರಣದ ಸಂಬಂಧ ಸಿಎಂ ಬೊಮ್ಮಾಯಿ ಅವರು ಡಿಸೆಂಬರ್ 30 & 31 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಜೊತೆ ಸಭೆ ನಡೆಸಲಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ಜರುಗಲಿದ್ದು, ಸಭೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮ, ಓಮಿಕ್ರಾನ್ ತಡೆಗೆ ಪೂರ್ವ ಸಿದ್ಧತೆ ಹಾಗೂ ರೈತ ವಿದ್ಯಾಸಿರಿ ವಿಶೇಷ ಚೇತನರ ಮಾಶಾಸನ ಸೇರಿದಂತೆ, ಯೋಜನೆ ಪ್ರಗತಿ ಬಗ್ಗೆ ಸಿಎಂ ಮಾಹಿತಿ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
