ಮೈಸೂರು: ಆಸ್ತಿ ಒತ್ತುವರಿ ಮತ್ತು ಅನಧಿಕೃತ ನಿವಾಸ ತೆರವು ಕಾರ್ಯದಲ್ಲಿ ನಿರತರಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸಾರ್ವಜನಿಕ ಸ್ಥಳಗಳಲ್ಲಿದ್ದ 50 ಅನಧಿಕೃತ ಮಳಿಗೆಗಳನ್ನು ತೆರವು ಮಾಡಿದ್ದಾರೆ.
ದೇವನೂರು 3ನೇ ಹಂತ, ಬಡಾವಣೆ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮುಂಭಾಗ, ನಾರಾಯಣ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಅಕ್ಕಪಕ್ಕದಲ್ಲಿಅನಧಿಕೃತವಾಗಿ ನಿರ್ಮಾಣವಾಗಿರುವ ಚಾಲನಾ ತರಬೇತಿ ಶಾಲೆ, ಟೀ ಅಂಗಡಿ, ಹೋಟೆಲ್ ಸೇರಿ ಒಟ್ಟು 50 ಮಳಿಗೆಗಳನ್ನು ಅಧಿಕಾರಿಗಳು ತೆರವು ಮಾಡಿದ್ದಾರೆ.

ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ನಿರ್ದೇಶನದ ಮೇರೆಗೆ ಪೊಲೀಸ್ ರಕ್ಷಣೆಯೊಂದಿಗೆ ಅನಧಿಕೃತ ಮಳಿಗೆಗಳನ್ನು ತೆರವುಮಾಡುವ ಕಾರ್ಯ ನಡೆಯಿತು. ಪೂರ್ವ ಪ್ರಾದೇಶಿಕಸಾರಿಗೆ ಅಧಿಕಾರಿಗಳ ಕಚೇರಿ ಸಮೀದಲ್ಲಿ ಅನಧಿಕೃತಚಾಲನಾ ತರಬೇತಿ ಶಾಲೆ ಆರಂಭಿಸಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತರು ದೂರು ಸಲ್ಲಿಸಿದ್ದರು. ಈ ಸಂಬಂಧ ಮುಡಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅನಧಿಕೃತ ಮಳಿಗೆಗಳನ್ನು ತೆರವು ಮಾಡಿದರು.
ಕಾರ್ಯಾಚರಣೆ ವೇಳೆ ಅಧೀಕ್ಷಕ ಅಭಿಯಂತರ ಶಂಕರ್, ಕಾರ್ಯಪಾಲಕ ಅಭಿಯಂತರರಾದ ಮೋಹನ್, ಸುನಿಲ್, ವಲಯಾಧಿಕಾರಿಗಳಾದ ಎಚ್.ಪಿ.ಶಿವಣ್ಣ, ಕೆ.ಆರ್.ಮಹೇಶ್, ಕಿರಣ್, ನಾಗೇಶ್, ಕೆ.ಸಿ.ರವಿಶಂಕರ್, ರಾಘವೇಂದ್ರ ಮತ್ತಿತರರಿದ್ದರು.