ಗಂಗಾವತಿ:- ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಯವರ ಸಂವಿಧಾನ ಬದಲಾವಣೆ ವಿಚಾರವಾಗಿ ಮಾತನಾಡಿರುವುದನ್ನು ಡಿ,ಎಸ್ ಎಸ್ (ಭೀಮವಾದ) ಸಿ ಕೆ ಮರಿಸ್ವಾಮಿ ಬರಗೂರು ತೀರ್ವವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಸರ್ಕಾರವು ಹಲವಾರು ಸುಳ್ಳು ಭರವಸೆಗಳನ್ನು ನೀಡುತ್ತಾ, ಈ ದೇಶದ ಬಹುಸಂಖ್ಯಾತರ ಪರವಾಗಿ ಕೆಲಸ ಮಾಡದೆ ದೇಶದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸುತ್ತಾ ಅಧಿಕಾರಕ್ಕೋಸ್ಕರ ದೇಶದಲ್ಲಿ ಜಾತಿ ಜನಾಂಗ ಧರ್ಮ ಎನ್ನದೆ ಒಂದು ಬಣ್ಣ ಒಂದು ಬಟ್ಟೆಯ ಮೇಲೆ ರಾಜಕೀಯ ಮಾಡುತ್ತಾ ಬಂದಿರುತ್ತಾರೆ ಆದರೆ ಈ ದೇಶದಲ್ಲಿ ಇವರು ತಂದ ಹಲವಾರು ಯೋಜನೆಗಳಲ್ಲಿ ಅಚ್ಚೆ ದಿನ್, ಒಂದು ನೂರು ಸ್ಮಾರ್ಟ್ ಸಿಟಿ, ಬೇಟೆ ಬಡಾವೋ ಬೇಟಿ ಬಚಾವೋ, ಇವತ್ತು ಕಂಡ ಕಂಡಲ್ಲಿ ಸಣ್ಣ ಸಣ್ಣ ಹೆಣ್ಣು ಮಕ್ಕಳ ಮೇಲೆ ಸ್ಕೂಲ್ ವಿದ್ಯಾರ್ಥಿಗಳ ಮೇಲೆ ಅಮಾಯಕ ಹೆಣ್ಣು ಮಕ್ಕಳ ಮೇಲೆ ದಲಿತ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಸಾಕಷ್ಟು ಅತ್ಯಾಚಾರಗಳು ನಡೆಯುತ್ತಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಮಣಿಪುರದ ಘಟನೆಯಲ್ಲಿ ಹೆಣ್ಣು ಮಕ್ಕಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿರುವುದು ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಗಮನಹರಿಸದೆ ಕೇವಲ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಈ ದೇಶದ ಜನರ ದಿಕ್ಕನ್ನು ಬದಲಾಯಿಸುತ್ತಿದ್ದಾರೆ,
ಇವರು ಯಾವುದೇ ರೈತರ ಪರವಾಗಿ ಕೂಲಿಕಾರ್ಮಿಕರ ಪರವಾಗಿ ದುಡಿಯುವ ವರ್ಗದವರ ಪರವಾಗಿ ದಿನಗೂಲಿ ಕಾರ್ಮಿಕರ ಪರವಾಗಿ ಬಡವರ ಪರವಾಗಿ ಕಡುಬಡವರ ಪರವಾಗಿ ಕೆಲಸ ಮಾಡದೆ, ಶ್ರೀಮಂತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ, ಇವತ್ತು ರೈತ ವಿರೋಧಿ ಚಟುವಟಿಕೆಗಳನ್ನು ಜಾರಿಗೆ ತಂದು ರೈತರು ರೈತ ವಿರೋಧ ಚಟುವಟಿಕೆಗಳನ್ನು ಖಂಡಿಸಿ ಡೆಲ್ಲಿಯಲ್ಲಿ ಸುಮಾರು ತಿಂಗಳ ಕಾಲ ಮಂಜುಗಡ್ಡೆ ಬೀಳುತ್ತಿದ್ದರೂ ಚಳಿಯಲ್ಲಿ ಪ್ರತಿಭಟನೆ ಮಾಡಿ ನೂರಾರು ರೈತರು ತೀರಿಕೊಂಡರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕಂಡರೂ ಕಾಣದಂತೆ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ, ಇವರು ರಾಜಕೀಯ ಅಧಿಕಾರವನ್ನು ಹಿಡಿಯುವುದಕ್ಕೋಸ್ಕರವೇ ನಮ್ಮ ದೇಶದ ಗಡಿಭಾಗದಲ್ಲಿರುವ ನಮ್ಮ ದೇಶವನ್ನು ರಕ್ಷಣೆ ಮಾಡುತ್ತಿರುವ ಪುಲ್ವಾಮಾ ದಾಳಿ ವಿಚಾರದಲ್ಲಿ 48 ಜನ ವೀರಯೋಧರನ್ನು ಬಲಿ ತೆಗೆದುಕೊಂಡಿರುವ ವಿಷಯ ಇನ್ನು ಈ ದೇಶದ ಜನರು ಮರೆತಿಲ್ಲ ಏಕೆಂದರೆ ಆ 48 ಜನ ಯೋಧರ ಕುಟುಂಬಗಳು ಇಂದು ನರಳಿ ನರಳಿ ಸಾಯುತ್ತಿದ್ದಾರೆ, ಇದಲ್ಲದೆ ಒಂದು ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ ವಿದೇಶದಿಂದ ಕಪ್ಪು ಹಣವನ್ನು ತಂದು ದೇಶದ ಒಬ್ಬೊಬ್ಬರ ಒಂದೊಂದು ಅಕೌಂಟಿಗೆ 15 ರೂಪಾಯಿಗಳನ್ನು ಹಾಕುತ್ತೇವೆ, ಇವತ್ತು ಪ್ರೈವೇಟ್ ಕಾಲೇಜುಗಳ ಡೊನೇಷನ್ ಹೆಚ್ಚಾಗೋಗಿದೆ ಬಡ ಮಕ್ಕಳು ಅಷ್ಟೊಂದು ದುಡ್ಡು ಕೊಟ್ಟು ವಿದ್ಯಾಭ್ಯಾಸ ಮಾಡದಂತೆ ಕುತಂತ್ರ ಬುದ್ಧಿಯನ್ನು ಓಡಿದ್ದರೆ, ಒಂದು ನೂರು ರೈಲ್ವೆ ಸ್ಟೇಷನ್ ಗಳನ್ನ ಖಾಸಗಿಕರಣ ಮಾಡಿದ್ದಾರೆ
ಬಿಎಸ್ಎನ್ಎಲ್ ನ್ನು ಕೊಡ ಖಾಸಗಿಕರಣ ಮಾಡಿದ್ದಾರೆ, ಸರ್ಕಾರಿ ಆಧೀನದಲ್ಲಿರುವ ಕೆಲವು ಸಂಸ್ಥೆಗಳನ್ನು ಸಂಪೂರ್ಣವಾಗಿ ಖಾಸಿಕರಣವನ್ನು ಮಾಡಿದ್ದಾರೆ, ಇವರು ಯಾವುದೇ ದೇಶದ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಧರ್ಮ ಧರ್ಮಗಳ ಮಧ್ಯೆ ಜಾತಿ ಜಾತಿಗಳ ಮಧ್ಯೆ ವಿಷ ಬೀಜಗಳನ್ನು ಬಿತ್ತಿ ಹಿಂದೂ ಮುಸ್ಲಿಂ ಎಂದು ಗಲಾಟೆಗಳನ್ನು ನಡೆಸಿ, ಮುಸಲ್ಮಾನರ ಮತ್ತು ಹಿಂದುಗಳ ಮಧ್ಯೆ ಭಿನ್ನಾಭಿಪ್ರಾಯಗಳನ್ನು ನೋಡಿಸಿ ತಮ್ಮ ರಾಜಕೀಯ ಬೇಳೆಗಳನ್ನು ಬೇಯಿಸಿಕೊಳ್ಳುತ್ತಿದ್ದಾರೆ, ಈಗ ಅನಂತಕುಮಾರ್ ಹೆಗಡೆ ಅಂತ ನಾಲಾಯಕರು ಈ ದೇಶದ ಸಂವಿಧಾನವನ್ನು ಬದಲಾವಣೆ ಮಾಡುವುದಕ್ಕೋಸ್ಕರವಾಗಿ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ರಾಜ್ಯವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಂತಹ ಸಂವಿಧಾನದಿಂದ ಈ ದೇಶದಲ್ಲಿ ಇರ್ತಕ್ಕಂತ ಪ್ರತಿಯೊಬ್ಬ ಬಡವ ಶ್ರೀಮಂತ ಪ್ರತಿಯೊಬ್ಬರೂ ನೆಮ್ಮದಿ ಮತ್ತು ರಕ್ಷಣೆಯಿಂದ ಸುರಕ್ಷತೆಯಿಂದ ಜೀವನವನ್ನು ನಡೆಸುತ್ತಿದ್ದಾರೆ ಇಂತಹ ದೇಶದ್ರೋಹ ಹೇಳಿಕೆಗಳನ್ನು ನೀಡುತ್ತಿರುವ ಅವಿವೇಕಿಗಳನ್ನು ಈ ಕೂಡಲೇ ಶಾಶ್ವತವಾಗಿ ಗಡಿಪಾರು ಮಾಡುವಂತೆ ತೀರ್ವವಾಗಿ ಆಕ್ರೋಶ ವ್ಯಕ್ತಪಡಿಸಿದರು
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಈ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ, ಎಂದು ಸಿಕೆ ಮರಿಸ್ವಾಮಿ ಬರಗೂರು ಡಿಎಸ್ಎಸ್ ಡಿ ಎಸ್ ಎಸ್ ಭೀಮವಾದ ಸಂಘಟನೆಯ ಜಿಲ್ಲಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು,
ಸಂದರ್ಭದಲ್ಲಿ, ತಾಲೂಕು ಅಧ್ಯಕ್ಷರು ಎಲ್ಲಪ್ಪ ಹಳೆಮನೆ, ಉಪಸಂಖ್ಯಾತರ ವಿಭಾಗದ ತಾಲೂಕ ಅಧ್ಯಕ್ಷರು ಅತಾ ಸಂಪಂಗಿ ಹುಲ್ಲೇಶ್ ಬೋವಿ
ವೆಂಕಟೇಶ್ ಟಿ, ಸದ್ದಾಂ, ಬಸವರಾಜ ಜಂತಕಲ್, ಮಂಜುನಾಥ್ ಗೋಮರ್ಸಿ, ಹನುಮೇಶ್ ಕನಕಗಿರಿ, ರವಿ ಗುಡ್ಲಲೂರು ಇತರರು ಭಾಗಿಯಾಗಿದ್ದರು,