ಕಲಬುರಗಿ:- ಜಿಲ್ಲೆಯ ಚಿತ್ತಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಹಲಕರ್ಟಿಯಲ್ಲಿ ವೀರಭದ್ರೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಿತು.
ಕಲ್ಯಾಣ ಕರ್ನಾಟಕದ ಅತ್ಯಂತ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಈ ಹಲಕರ್ಟಿ ಗ್ರಾಮದ ವೀರಭದ್ರೇಶ್ವರ ಸನ್ನಿಧಿಗೆ ಅಪಾರ ಭಕ್ತರು ನಿನ್ನೆಯಿಂದಲೇ ಆಗಮಿಸಿದ್ರು. ಅಗ್ಗಿ ತುಳಿಯುವುದು ರಥೋತ್ಸವ ನಡೆಯುವುದು ಹಾಗು ಪುರವಂತಿಕೆ ಆಡುವುದು ಈ ಜಾತ್ರೆಯ ವೈಶಿಷ್ಟ್ಯ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಾತ್ರೆಗೆ ಆಗಮಿಸಿ ಜನ ಹರ ಹರಾ ವೀರಭಧ್ರ ಅಂತ ಘೋಷಣೆ ಕೂಗುತ್ತ ವೀರಭದ್ರೇಶ್ವರನ ಕೃಪೆಗೆ ಪಾತ್ರರಾದರು.
ಸತತ ಒಂದು ವಾರಗಳ ಕಾಲ ಜಾತ್ರೆಯ ರಂಗು ಜನರ ಕಣ್ಮನ ಸೆಳೆಯುತ್ತೆ..