ಬೆಂಗಳೂರು: ಬೆಡ್ ಸಿಗದೇ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮಗು ಸಾವು ಪ್ರಕರಣ ಸಂಬಂಧ ಇಂದು ಕುಟುಂಬದವರು ಹಾಗೂ ಆಂಬುಲೆನ್ಸ್ ಚಾಲಕರಿಂದ ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಡವರ ಮಕ್ಕಳಿಗೆ ಒಂದು ನ್ಯಾಯ… VIP ಗಳಿಗೆ ಆಸ್ಪತ್ರೆಯಲ್ಲಿ ಬೇರೆಯದ್ದೇ ನ್ಯಾಯ ದೊಡ್ಡ ದೊಡ್ಡವರು ಕಾಲ್ ಮಾಡಿದ್ರೆ ಬೆಡ್ ಸಿಗುತ್ತೆ, ಟ್ರೀಟ್ಮೆಂಟ್ ಮಾಡ್ತಾರೆ ಬಡವರು ದೂರದೂರಿನಿಂದ ಬಂದ್ರೂ ಆಸ್ಪತ್ರೆಯ ಗೇಟ್ ಒಳಗೂ ಬಿಡಲ್ಲ ಪ್ರಥಮ ಚಿಕಿತ್ಸೆಯೂ ಕೊಡಲ್ಲ ಎಂದು ಮಗುವಿನ ಕುಟುಂಬಸ್ಥರ ಅಳಲು. ಹಾಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಇಲ್ಲ ಅಂತಾನೇ ಬಣ್ಣ ಬಣ್ಣದ ಕಾಗೆ ಹಾರಿಸ್ತಾರೆ ಅಂತ ಆಂಬ್ಯುಲೆನ್ಸ್ ಚಾಲಕರು ಕಿಡಿ ಕಾರಿದ್ದಾರೆ.
ಸದ್ಯ ಸ್ಥಳೀಯ ಪೊಲೀಸರಿಗೆ ಎಂಎಲ್ ಸಿ ರಿಪೋರ್ಟ್ ಕಳಿಸಿದ ನಿಮ್ಹಾನ್ಸ್ ವೈದ್ಯರು ಸಿದ್ದಾಪುರ ಪೊಲೀಸರಿಗೆ ಎಂಎಲ್ ಸಿ ರಿಪೋರ್ಟ್ ರವಾನೆ ಸಿದ್ದಾಪುರ ಪೊಲೀಸರಿಂದ ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಠಾಣೆಗೆ ರಿಪೋರ್ಟ್ ರವಾನೆ. ಈಗಲೇ ಎಂಎಲ್ ಸಿ ರಿಪೋರ್ಟ್ ನ್ನ ಗೋಣಿ ಬೀಡು ಪೊಲೀಸ್ ಠಾಣೆಗೆ ರವಾನಿಸಿದ ಸಿದ್ದಾಪುರ ಪೊಲೀಸರು
ಇಂದು ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ ನೀಡಲಿರುವ ಗೋಣಿ ಬೀಡು ಪೊಲೀಸರು ಆಸ್ಪತ್ರೆಯಿಂದ ಮಾಹಿತಿ ಕಲೆ ಹಾಕಿ, ಬಳಿಕ ಮಗುವಿನ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮಗುವಿನ ಮೃತದೇಹ ಹಸ್ತಾಂತರ ಮೃತದೇಹ ಸಿಕ್ಕ ಬಳಿಕ ಆಂಬ್ಯುಲೆನ್ಸ್ ಚಾಲಕರು ಹಾಗೂ ಮಗುವಿನ ಕುಟುಂಬದಿಂದ ಪ್ರತಿಭಟನೆ
ಏನಿದು ಪ್ರಕರಣ
ಸಾವು ಬದುಕಿನ ನಡ್ವೆ ಹೋರಾಡ್ತಿರೋ ಪುಟ್ಟ ಕಂದಮ್ಮಗೆ ಚಿಕಿತ್ಸೆ ನೀಡದ ನಿಮ್ಹಾನ್ಸ್ ವೈದ್ಯರು
-ಹಾಸನದಿಂದ ಜೀರೋ ಟ್ರಾಫಿಕ್ ನಲ್ಲಿ ಬಂದಿದ್ದ ಮಗು
-ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಪೋಷಕರ ಆಕ್ರೋಶ,
ಗಲಾಟೆ
-ಬೆಡ್ ಖಾಲಿಯಿಲ್ಲ ಎಂದು ಆಸ್ಪತ್ರೆಯ ಆವರಣದಲ್ಲಿಯೇ ನಿಲ್ಲಿಸಿದ್ದ ಆಡಳಿತ ಮಂಡಳಿ
-ಒಂದು ಘಂಟೆಗೂ ಅಧಿಕ ಕಾಲ ಆಂಬ್ಯೂಲೆನ್ಸ್ ನಲ್ಲೇ ಇರುವ ಮಗು
-ಪ್ರಾಥಮಿಕ ಚಿಕಿತ್ಸೆಯನ್ನೂ ನೀಡದೇ ಬೇಜವಾಬ್ದಾರಿ
-1 ವರ್ಷದ ಮಗು, 10 ಅಡಿ ಮೇಲಿಂದ ಜಾರಿ ಕೆಳಗೆ ಬಿದ್ದಿತ್ತು
-ತಲೆಗೆ ತೀವ್ರವಾಗಿ ಗಾಯಗೊಂಡು, ಅಸ್ವಸ್ಥಗೊಂಡಿದ್ದ ಮಗು
-ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದ ಪೋಷಕರು
-ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್ ಗೆ ಹೋಗುವಂತೆ ಸೂಚಿಸಿದ್ದ ಹಾಸನ ಸರ್ಕಾರಿ ಆಸ್ಪತ್ರೆಯ ವೈದ್ಯರು
-ಝೀರೋ ಟ್ರಾಫಿಕ್ ನಲ್ಲಿ ಬರ್ತಿದ್ದು, ಬೆಡ್ ಕಾಯ್ದಿರಿಸುವಿಕೆಗಾಗಿ ನಿಮಾನ್ಸ್ ಆಡಳಿತ ಮಂಡಳಿಗೆ ತಿಳಿಸಿದ್ದ ಹಾಸನ ಸರ್ಕಾರಿ ಆಸ್ಪತ್ರೆಯ ವೈದ್ಯರು
– ಈಗ ಮಗುವಿಗೆ ಬೆಡ್ ಇಲ್ಲ ಎಂದ ನಿಮಾನ್ಸ್ ಆಡಳಿತ ಮಂಡಳಿ
– ಝೀರೋ ಟ್ರಾಫಿಕ್ ನಲ್ಲಿ ಹಾಸನದಿಂದ ನಿಮಾನ್ಸ್ ಗೆ ಕೇವಲ 1ಘಂಟೆ 40 ನಿಮಿಷದಲ್ಲಿ ಬಂದಿದ್ದ ಆಂಬ್ಯೂಲೆನ್ಸ್
– ಹಲವು ಆಕ್ರಂದನ ಅಳು ನೋವಿಗೆ ಕಾರಣ ಆಗಿತ್ತು ನಿಮ್ಹಾನ್ಸ್ ಆಸ್ಪತ್ರೆಯ ಆವರಣ