ಬೆಂಗಳೂರು: ಬುಧವಾರ ಹಾಸನದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ನಲ್ಲಿ ಬಂದರೂ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ನೀಡದೇ ಹೋಗಿದ್ದಕ್ಕೆ 1 ವರ್ಷದ ಮಗು (Child) ಸಾವನ್ನಪ್ಪಿರುವ ಪ್ರಕರಣಕ್ಕೆ ಆಸ್ಪತ್ರೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಭ್ರೂಣ ಹತ್ಯೆ ಪ್ರಕರಣ ವಿಚಾರ: CID ತನಿಖೆಗೆ ಆದೇಶ ಮಾಡಿದ ರಾಜ್ಯ ಸರ್ಕಾರ
ಈ ಬಗ್ಗೆ ಮಾಹಿತಿ ನೀಡಿರುವ ನಿಮ್ಹಾನ್ಸ್ ಸ್ಥಾನಿಕ ಅಧಿಕಾರಿ ಡಾ. ಶಶಿಧರ್, ನಮಗೆ ಹಾಸನದ ಸರ್ಕಾರಿ ಆಸ್ಪತ್ರೆಯಿಂದ ಯಾವುದೇ ಮಾಹಿತಿ ಬಂದಿರಲಿಲ್ಲ. ಮಗು ಆಸ್ಪತ್ರೆಗೆ ತಲುಪುವ 1 ಗಂಟೆ ಮೊದಲು ಮಾಹಿತಿ ಬಂದಿತ್ತು. ಅಂಬುಲೆನ್ಸ್ ಚಾಲಕರೊಬ್ಬರು ಹಾಸನ ಮೆಡಿಕಲ್ ಕಾಲೇಜಿನ ರಿಪೋರ್ಟ್ ತೋರಿಸಿದ್ದರು. ಅದನ್ನು ನೋಡಿದಾಗಲೇ ನಮ್ಮ ವೈದ್ಯರು ಮಗು ಬದುಕುವ ಸಾಧ್ಯತೆ ತೀರಾ ಕಡಿಮೆಯಾಗಿತ್ತು, ಇಲ್ಲಿಗೆ ಕರೆತರುವ ಅಗತ್ಯವಿಲ್ಲ ಅಂತಾ ಹೇಳಿದ್ದೆವು ಎಂದು ತಿಳಿಸಿದರು.
ನಾವು ಮಗುವನ್ನು ಆಸ್ಪತ್ರೆಗೆ ತಂದ ಬಳಿಕ ಅಂಬುಲೆನ್ಸ್ನಲ್ಲೇ ಪರೀಕ್ಷೆ ಮಾಡಿದ್ದೇವೆ. ಅಂಬುಲೆನ್ಸ್ನಲ್ಲಿಯೇ ಮಗು ವೆಂಟೀಲೇಟರ್ನಲ್ಲಿ ಇತ್ತು. ಆದರೆ 10 ನಿಮಿಷದ ಬಳಿಕ ಮಗುವನ್ನು ಒಳಗಡೆ ಚಿಕಿತ್ಸೆಗೆ ಕಳುಹಿಸಿದ್ದೇವೆ. ಆದರೆ 2 ಗಂಟೆ ಚಿಕಿತ್ಸೆ ಕೊಟ್ಟರೂ ಮಗು ಬದುಕಲಿಲ್ಲ. ಸತತ 2 ಗಂಟೆಯ ಕಾಲ ಮಗುವನ್ನು ಬದುಕಿಸಲು ಪ್ರಯತ್ನ ಪಟ್ಟಿದ್ದೇವೆ. ನಮ್ಮ ಕಡೆಯಿಂದ ಏನೇನು ಮಾಡಲು ಸಾಧ್ಯವಿತ್ತೋ ಎಲ್ಲಾ ಎಫರ್ಟ್ ಹಾಕಿದ್ದೇವೆ. ಆದರೆ ಮಗುವನ್ನು ಬದುಕಿಸಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.