ಚಿಕ್ಕಮಗಳೂರು:- ಅಜ್ಜಂಪುರ ತಾಲೂಕಿನ ಅಬ್ಬಿನಹೊಳಲು ಗ್ರಾಮದ ಸೇತುವೆ ಕುಸಿದು 6 ಹಳ್ಳಿಗಳ ಸಂಪರ್ಕ ಕಡಿತಗೊಂಡ ಘಟನೆ ಜರುಗಿದೆ.
1005 FIR, 284 ಅಸ್ವಾಭಾವಿಕ ಸಾವು: 1 ವರ್ಷದಲ್ಲೇ ಬೆಂಗಳೂರಿನ ಈ ಠಾಣೆಯಲ್ಲಿ ಅತಿ ಹೆಚ್ಚು ಕೇಸ್ ದಾಖಲು!
ಈ ಸೇತುವೆ ಬಹಳ ಹಳೆಯ ಸೇತುವೆಯಾಗಿದೆ. ಸೇತುವೆ ಬಗ್ಗೆ ಗಮನ ಹರಿಸದೆ ಇಂಜಿನಿಯರ್ಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಹರಿಸುತ್ತಿದ್ದಾರೆ. ಪರಿಣಾಮ ಜನರು ಪರದಾಡುವಂತಾಗಿದೆ ಎಂದು ಗ್ರಾಮಗಳ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯ ನೀರಿನ ರಭಸಕ್ಕೆ ಅಜ್ಜಂಪುರ ತಾಲೂಕಿನ ಅಬ್ಬಿನಹೊಳಲು ಗ್ರಾಮದ ಸೇತುವೆ ಮುರಿದು ಬಿದ್ದಿದೆ. ಪರಿಣಾಮ ಐದಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.
ಮಕ್ಕಳು ಶಾಲಾ-ಕಾಲೇಜಿಗೆ ಹೋಗಲು ಸಾಧ್ಯವಾಗದೆ, ರೈತರು ಹೊಲ-ಗದ್ದೆ, ತೋಟ, ಮನೆಗಳಿಗೆ ಹೋಗಿ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಸ್ಥಳಕ್ಕೆ ಭೇಟಿ ಕೊಟ್ಟು ಒಂದು ವರ್ಷ ತುಂಬಿಲ್ಲ. ಈಗಲೇ ಇಂತಹ ಅನಾಹುತ ನಡೆದಿದೆ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.