ಬೃಹತ್ ಬಂಡೆಗಳ ಕೆಳಭಾಗದ ಮಣ್ಣು ಭಾರೀ ಮಳೆಗೆ ಕೊಚ್ಚಿ ಹೋಗಿದ್ದು ಎರಡು ಬಂಡೆಗಳು ಕೂದಲೆಳೆ ಅಂತರದಲ್ಲಿ ನಿಂತಂತಿದೆ. ಮತ್ತೆ ಮಳೆಯಾದರೇ ಅಥವಾ ಬಿರುಗಾಳಿಗೆ ಬಂಡೆಗಳು ಕುಸಿದು ಬೀಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಆ ಕಿರಿದಾದ ರಸ್ತೆಯಲ್ಲಿ (Charmadi Ghat Road) ಬಂಡೆಗಳು ಕುಸಿದು ಬಿದ್ದರೆ ಮತ್ತೊಂದು ಬದಿ ಪ್ರಪಾತವಿರುವುದರಿಂದ ರಸ್ತೆಯೇ ಕುಸಿಯುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕಪಟ್ಟಿದ್ದಾರೆ.
ಒಂದು ವೇಳೆ ಟ್ರಾಫಿಕ್ ಜಾಮ್, ಸೆಲ್ಫಿ ಕ್ರೇಜ್, ಇನ್ಯಾವುದೋ ಕಾರಣಕ್ಕೆ ಟ್ರಾಫಿಕ್ ಜಾಮ್ ಆದ ಸಂದರ್ಭದಲ್ಲಿ ಕೆಳಗಡೆ ವಾಹನಗಳು ಇದ್ದರೇ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆಯೂ ಇದೆ. ಹಾಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಅತ್ಯಂತ ಎಚ್ಚರದಿಂದಿರುವಂತೆ ಅಲ್ಲಿನ ಸ್ಥಳೀಯರೇ ಮನವಿ ಮಾಡುತ್ತಿದ್ದಾರೆ.
ಅಲ್ಲದೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅನಾಹುತ ಸಂಭವಿಸುವ ಮೊದಲೇ ಕಲ್ಲುಗಳನ್ನ ಸ್ಥಳಾಂತರಿಸಿದರೇ ಅಥವಾ ಕೆಳಗೆ ಇಳಿಸಿದ್ರೆ ಮುಂದಾಗುವ ಅನಾಹುತ ತಪ್ಪಿಸಬಹುದು ಎಂದು ಹೆದ್ದಾರಿ ಪ್ರಾಧಿಕಾರದ (Highway Authority) ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ