ಮೃತ ಕಿರುತೆರೆ ನಟಿ ಪವಿತ್ರಾ ಜಯರಾಮ್ ಜೊತೆಗಿದ್ದ ಗೆಳೆಯ ಚಂದು ಆತ್ಮಹತ್ಯೆ

ಕಳೆದ ನಾಲ್ಕೈದು ದಿನಗಳ ಹಿಂದೆ ಕನ್ನಡದ ನಟಿ, ಸದ್ಯ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದ ನಟಿ ಪವಿತ್ರಾ ಜಯರಾಂ ರಸ್ತೆ ಅಪಘಾತದಲ್ಲಿ ನಿಧನರಾದರು. ಈಗ ಇನ್ನೊಂದು ಶಾಕಿಂಗ್​ ಸುದ್ದಿ ಕೇಳಿಬಂದಿದೆ. ಪವಿತ್ರಾ ಜಯರಾಮ್​ ಜೊತೆ ಸ್ನೇಹ ಹೊಂದಿದ್ದ ತೆಲುಗು ಕಿರುತೆರೆ ನಟ ಚಂದು ಅವರು ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಪವಿತ್ರಾ ಜಯರಾಮ್​ ಜೊತೆ ಚಂದು ಆಪ್ತವಾಗಿದ್ದರು. ಪವಿತ್ರಾ ನಿಧನದ ಬಳಿಕ ತೀವ್ರ ದುಃಖಕ್ಕೆ ಒಳಗಾಗಿದ್ದ ಚಂದು ಅವರು ಹೈದರಾಬಾದ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲುಗಿನ ಹಲವು ಧಾರಾವಾಹಿಗಳಲ್ಲಿ ಚಂದು ನಟಿಸುತ್ತಿದ್ದರು. ಇತ್ತೀಚೆಗೆ … Continue reading ಮೃತ ಕಿರುತೆರೆ ನಟಿ ಪವಿತ್ರಾ ಜಯರಾಮ್ ಜೊತೆಗಿದ್ದ ಗೆಳೆಯ ಚಂದು ಆತ್ಮಹತ್ಯೆ