ಇಂದು ಅಹ್ಮದಾಬಾದ್​ ಮೈದಾನದಲ್ಲಿ ವಿಶ್ವಕಪ್​ ಫೈನಲ್​ ಪಂದ್ಯ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ವಿಶ್ವಕಪ್​ ಅಂತಿಮ ಹಣಾಹಣಿ ಶುರುವಾಗಲಿದೆ. ಈ ಮೆಗಾ ಫೈಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಸೆಣಸಾಡಲಿದೆ.

ಈಗಾಗಲೇ ಭಾರತದೆಲ್ಲಡೆ ವಿಶ್ವಕಪ್‌ ಜ್ವರ ತಾರಕಕ್ಕೇರಿದೆ. ಎಲ್ಲಿ ನೋಡಿದರೂ, ಯಾರ ಬಳಿ ಕೇಳಿದರೂ ಸಹ ಕೇವಲ ವಿಶ್ವಕಪ್‌ ಜಪ ಮಾತ್ರ ಗುನುಗುತ್ತಿದೆ. ಕರುನಾಡಲ್ಲಿ ಈ ಫೀವರ್‌ ಇನ್ನಷ್ಟು ಹೆಚ್ಚಿಸಲು ಇಂದು ಅಭಿಮಾನಿಗಳ ಪಾಲಿನ ಚಾಲೆಂಜಿಂಗ್‌ ಸ್ಟಾರ್‌ ಬರಲಿದ್ದಾರೆ.

ಹೌದು, ಕನ್ನಡದ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಕನ್ನಡದ ಖ್ಯಾತ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ವಿಶ್ವಕಪ್‌ 2023ರ ಫೈನಲ್‌ಗಾಗಿ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಸ್ವತಃ ಸ್ಟಾರ್‌ ಸ್ಪೋರ್ಟ್ಸ್‌ ಖಚಿತ ಪಡಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ ಫೈನಲ್ ಪಂದ್ಯಕ್ಕೆ ಚಿಯರ್ ಮಾಡೋಕೆ ಯಾರ್ ಬರ್ತಿದ್ದಾರೆ ಗೊತ್ತಾ?‘ ಎಂದು ಬರೆದು ಡಿ ಬಾಸ್‌‌ ಬರೆದಿರುವ ಟೀಂ ಇಂಡಿಯಾ ಜೆರ್ಸಿ ಫೋಟೋವನ್ನು ಹಂಚಿಕೊಂಡಿದ್ದಾರೆ

Share.