ಬೆಂಗಳೂರು: ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಿದ ಹಿನ್ನೆಲೆ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಕಚೇರಿಗೆ ಕರೆತರಲಾಗಿದ್ದು, ಚೈತ್ರಾ ಮೌನಕ್ಕೆ ಜಾರಿದ್ದಾರೆ. ಸದ್ಯ ತನಿಖಾಧಿಕಾರಿ ರೀನಾ ಸುವರ್ಣ ಅವರು ಕಚೇರಿಗೆ ಆಗಮಿಸಿದ ನಂತರ ವಿಚಾರಣೆ ಆರಂಭಗೊಳ್ಳಲಿದೆ.
ಚೈತ್ರಾಳ ಬಾಯಲ್ಲಿ ನೊರೆ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಫಂಕ್ಷನಲ್ ಆಗಿ ಆಗಿರೋದು. ಅವರೇ ಅದನ್ನ ಮಾಡಿಕೊಂಡಿರೋದು. ಪಿಟ್ಸ್ ಏನೂ ಬಂದಿಲ್ಲ. ಬೆಳಗ್ಗೆ ಸಿಸಿಬಿ ಅಧಿಕಾರಿಗಳು ವಿಚಾರಿಸಿದ್ದಾರೆ, ಆರೋಗ್ಯ ಚೆನ್ನಾಗಿದೆ ಎಂದು ತಿಳಿಸಿದ್ದಾರೆ

ಇದೇ ವೇಳೆ ಪಿಟ್ಸ್ ಇತ್ತ ಎಂಬ ವಿಚಾರಕ್ಕೆ ಉತ್ತರಿಸಿದ ವೈದ್ಯರು, ಪಿಟ್ಸ್ ಪತ್ತೆ ಮಾಡೋದಕ್ಕೆ ಎಂಆರ್‌ಐ ಸ್ಕ್ಯಾನಿಂಗ್ ಮಾಡಿದ್ದೀವಿ. ಇಇಜಿ ಸ್ಕ್ಯಾನಿಂಗ್ ಕೂಡ ಮಾಡಿದ್ದೇವೆ ಎಲ್ಲಾ ನಾರ್ಮಲ್ ಇದೆ. ಸದ್ಯಕ್ಕೆ ಪಿಟ್ಸ್ ಕಂಡು ಬಂದಿಲ್ಲ. ನ್ಯೂರಾಲಾಜಿಸ್ಟ್ ಕೆಲವು ಮಾತ್ರೆ ಕೊಟ್ಟಿದ್ದಾರೆ ಎಂದು ವಿವರಿಸಿದ್ದಾರೆ.
