ಬೆಂಗಳೂರು;- ಉದ್ಯಮಿಗೆ ಕೋಟಿ ಕೋಟಿ ವಂಚಿಸಿದ ಚೈತ್ರಾ ಕುಂದಾಪುರ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಪೊಲೀಸರ ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಅಂತ ಚಕ್ರವರ್ತಿ ಸೂಲಿಬೆಲೆ ಸ್ಪಷ್ಟ ಪಡಿಸಿದ್ದಾರೆ. ಪ್ರಕರಣದಲ್ಲಿ ನನ್ನ ಹೆಸರು ನೇರವಾಗಿ ಬಂದಿಲ್ಲ. ಆದರೆ ಸ್ವಾಮೀಜಿ ಈ ವಿಚಾರವನ್ನು ನನ್ನ ಬಳಿ ಪ್ರಸ್ತಾಪ ಮಾಡಿದ್ದೇನೆ ಎಂದಿದ್ದಾರೆ. ಆದರೆ ನನ್ನ ತಪ್ಪಿದ್ದರೆ ತನಿಖೆ ಆಗಲಿ” ಅಂತ ಅವರು ಹೇಳಿದ್ದಾರೆ. ಚೈತ್ರಾ ಕುಂದಾಪುರ ಅವರನ್ನು ಸುಮಾರು 10 ವರ್ಷಗಳ ಹಿಂದೆ ನೋಡಿದ್ದೆ ಅಂತ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಆಗ ನಾನು 45 ನಿಮಿಷಗಳ ಕಾಲ ಸಂದರ್ಶನದಲ್ಲಿ ಅವರೊಂದಿಗೆ ಮಾತನಾಡಿದ್ದೆ. ಆಗಷ್ಟೇ ನಾನು ಭೇಟಿಯಾಗಿದ್ದು, ಆನಂತರ ಕಾರ್ಯಕ್ರಮಗಳಲ್ಲಿ ಭಾಗಿಯಾದ್ರೂ, ಅವರೊಂದಿಗೆ ನನಗೆ ಹೆಚ್ಚಿನ ಸಂಪರ್ಕ ಇರಲಿಲ್ಲ ಅಂತ ಸೂಲಿಬೆಲೆ ಹೇಳಿದ್ದಾರೆ.
ಹಿಂದುತ್ವದ ಹೆಸರಿನಲ್ಲಿ ಮೋಸ ಮಾಡೋದು ಒಳಿತಲ್ಲ ಅಂತ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ಪಟ್ಟಿದ್ದಾರೆ. ಬಿಜೆಪಿಯಲ್ಲಿ ಈ ರೀತಿ ನಡೆಯೋದಿಲ್ಲ, ದುಡ್ಡು ಕೊಟ್ಟು ಎಲೆಕ್ಷನ್ ಟಿಕೆಟ್ ಖರೀದಿಸೋಕೆ ಆಗಲ್ಲ ಅಂತ ಜನರಿಗೆ ಗೊತ್ತಾಗಬೇಕು. ಗೊತ್ತಾಗೋದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.
