ನವದೆಹಲಿ ;- ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ಒದಗಿಸಲು 1.35 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ನೀಡಲು ನಾವು ವಿನಂತಿಸಿದ್ದೇವೆ ಆದರೆ ಕೇಂದ್ರ ಆಹಾರ ಸಚಿವರು ಅಕ್ಕಿಯನ್ನು ನೀಡಲು ನಿರಾಕರಿಸಿರುತ್ತಾರೆ ಎಂದರು.
ದೆಹಲಿಯಲ್ಲಿ ನಡೆದ ಸಭೆಯ ಬಳಿಕ ಸಚಿವರು ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡುವಾಗ ಹೀಗೆ ತಿಳಿಸಿದರು. ಇಂದು ಕೇಂದ್ರ ಜವಳಿಯ ಸಕ್ಕರೆ ಮತ್ತು ಕೃಷಿ ಸಚಿವರಾದ ಪಿಯೂಷ್ ಗೋಯಲ್ ರವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರದ ಅನ್ಯ ಭಾಗ್ಯ ಯೋಜನೆಗೆ ಅಕ್ಕಿಯನ್ನು ನೀಡಲು ಮನವಿ ಮಾಡಿದವು. ಆದರೆ ಕೇಂದ್ರ ಸಚಿವರು 300 lakh ton ಇತರೆ ವಿವಿಧ ಯೋಜನೆಗಳಿಗೆ ಮೀಸಲಿಡಲಾಗಿದೆ. ಆದ್ದರಿಂದ ರಾಜ್ಯಕ್ಕೆ ಅಕ್ಕಿ ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿರುತ್ತಾರೆ.

ಆದರೆ ರಾಜ್ಯ ಸರ್ಕಾರವು ಅನ್ನಭಾಗ್ಯದ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತದೆ ಎಂದು ಕೆ ಎಚ್ ಮುನಿಯಪ್ಪ ರವರು ತಿಳಿಸಿದರು.
