ಬೆಂಗಳೂರು: ಮೆಟ್ರೋ ದರ ಏರಿಕೆ ಆಗಿರುವುದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದರ ಏರಿಕೆ ಜನಕ್ಕೆ ಹೊರೆ ಆಗುತ್ತದೆ. ಅದಕ್ಕಾಗಿ ನಾನು ಕೇಂದ್ರ ಸರ್ಕಾರಕ್ಕೆ ಸಬ್ಸಿಡಿ ಕೊಡಲಿ ಎಂದು ಹೇಳುತ್ತೇನೆ.
ಮೆಟ್ರೋ ದರ ಏರಿಕೆ ಆಗಿರುವುದಕ್ಕೆ ಕೇಂದ್ರ ಸರ್ಕಾರವೇ ಕಾರಣ. ಮೋದಿ ಅವರನ್ನು ಪ್ರಶ್ನಿಸಲು ನಮ್ಮ ಸಂಸದರಿಗೆ ಧೈರ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ರೈಲ್ವೆ ವಿಷಯ ಬಂದ ಕೂಡಲೇ ಪಿಸಿ ಮೋಹನ್, ತೇಜಸ್ವಿಸೂರ್ಯ ನಾವೇ ಮೆಟ್ರೋ ತಂದಿದ್ದು ಎನ್ನುವ ರೀತಿ ಮಾತಾಡ್ತಾರೆ.
ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರಬೇಕಾ.? ಹಾಗಿದ್ರೆ ಈ ದಿನಗಳಲ್ಲಿ ಪೊರಕೆ ಖರೀದಿಸಬಾರದು.!
ಮನಮೋಹನ್ ಸಿಂಗ್ ನೇತೃತ್ವದಲ್ಲಿ ಮೆಟ್ರೋ ಬಂದಿದೆ. ಕೆಲವರು ಫೋಸ್ ಕೊಡೋ ಕೆಲಸ ಮಾಡುತ್ತಾರೆ. ಪ್ರಹ್ಲಾದ್ ಜೋಶಿ ಕೂಡಾ ಸುಳ್ಳು ಹೇಳ್ತಾರೆ. ಬೊಮ್ಮಾಯಿ, ಶೆಟ್ಟರ್ ಕೂಡಾ ಮೆಟ್ರೋ ದರ ರಾಜ್ಯ ಏರಿಕೆ ಮಾಡಿದ್ದು ಅಂತಾರೆ.ಮಾಜಿ ಸಿಎಂ ಆದವರು ಹೀಗೆ ಹಸಿಸುಳ್ಳು ಹೇಳ್ತಾರೆ. ಇವರಿಗೆ ಸಿಎಂ ಆಗಲಿ ಅರ್ಹತೆ ಇರಲಿಲ್ಲ. ಅಂತವರನ್ನ ಬಿಜೆಪಿ ಸಿಎಂ ಮಾಡಿತ್ತು ಎಂದು ಸಿಟ್ಟು ಹೊರ ಹಾಕಿದರು.