ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತಹಸಿಲ್ದಾರ್ ಕಾರ್ಯಾಲಯದಲ್ಲಿ ತೇರದಾಳ ಮತಕ್ಷೇತ್ರದ ಮುಖ್ಯ ಚುನಾವಣಾ ಅಧಿಕಾರಿಗಳಿದ ಸುದ್ದಿ ಗೋಷ್ಠಿ ನಡೆಯಿತು. ದಿ. 16. 03. 2024 ರಿಂದ ಭಾರತ ಚುನಾವಣಾ ಆಯೋಗದಿಂದ ಚುನಾವಣಾ ದಿನಾಂಕ ಘೋಷಣೆಯಾಗಿದೆ ಅಂದಿನಿಂದ ಇಡೀ ದೇಶದಾದಂತ ನೀತಿ ಸಹಿತಿ ಜಾರಿಯಲ್ಲಿದೆ. ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ದಿ. 21. 01. 24 ಮತದಾರರು ಪಟ್ಟಿಯಲ್ಲಿ ಒಟ್ಟು 2.32 869 ಮತದಾರರು ಇದ್ದು ಅದರಲ್ಲಿ ಗಂಡು 1.15.654
- ಹೆಣ್ಣು 1.17.203 ತೈತಿಯಲಿಂಗ 12 ಮತದಾರರು ಇದ್ದಾರೆ.
- 26 ಸೂಕ್ಷ್ಮ ಮತಗಟ್ಟೆಗಳು 210 ಸಾಮಾನ್ಯ ಮತಗಟ್ಟೆಗಳು ಇದ್ದಾವೆ.
- ಅಭ್ಯರ್ಥಿಗಳು ದಿನಾಂಕ. 12. 4. 2024 ರಂದು ನಾಮಪತ್ರ ಸಲ್ಲಿಸುವುದು.
- 19.04.2024 ರಂದು ನಾಮಪತ್ರವನ್ನ ಹಿಂದಕ್ಕೆ ತೆಗೆದುಕೊಳ್ಳುವುದು.
- 24-04.2024ರಂದು ನಾಮಪತ್ರವನ್ನು ಪರಿಶೀಲಿಸುವುದು.
- 22. 4. 2024 ರಂದು ಕಣದಲ್ಲಿ ಉಳಿದ ಅಭ್ಯರ್ಥಿಗಳ ಮಾಹಿತಿಯನ್ನು ನೀಡಲಾಗುವುದು.
- 7.05.2024 ರಂದು ಮಂಗಳವಾರ ಮತದಾನ ಮಾಡುವುದು.
- 04.05. 2024 ರಂದು ಫಲಿತಾಂಶ ಹೊರಬೀಳಲಿದೆ.
ತೇರದಾಳ ವಿಧಾನಸಭಾ ಕ್ಷೇತ್ರದ ನಗರ ಪ್ರದೇಶದಲ್ಲಿ 836 ಮತಗಟ್ಟೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 106 ಮತಗಟ್ಟೆಗಳು ಒಂದು ಮಾಲಿಂಗಪುರದ ಕೆಂಗೇರಿಯಲ್ಲಿ ಹೆಚ್ಚುವರಿ ಒಂದು ಮತಗಟ್ಟೆಯನ್ನು ನಿರ್ಮಿಸಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸರ್ಕಾರಿ ಬಂಗಲೇ ಮತ್ತು ಸರ್ಕಾರಿ ವಾಹನಗಳನ್ನು ಬಳಸ್ತಕಂತ ವಾಹನಗಳನ್ನು ಈಗಾಗಲೇ ನಾವು ವಶಪಡಿಸಿಕೊಂಡಿದ್ದೇವೆ.
ತೇರದಾಳ ಮತಕ್ಷೇತ್ರದಲ್ಲಿ ಒಟ್ಟು ಮೂರು ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಮಾಲಿಂಗಪುರ. ತೇರದಾಳ. ಪಿಡಿ ಬುದ್ನಿ ನಗರದಲ್ಲಿ ಚೆಕ ಪೋಸ್ಟ್ ನಿರ್ಮಿಸಲಾಗಿದೆ. 85 ವರ್ಷದ ಮತದಾರರಿಗೆ ಮನೆಯಲ್ಲೇ ಮತದಾನ ಮಾಡುವ ಹಕ್ಕನ್ನು ಭಾರತ ಚುನಾವಣೆ ಆಯೋಗ ನೀಡಿದೆ. ಪೋಸ್ಟ್ ಮುಖಾಂತರ ಮತದಾನ ಮಾಡುವ ಹಾಗಿಲ್ಲ ಸರ್ಕಾರಿ ನೌಕರು ಕಡ್ಡಾಯವಾಗಿ ಆಯಾ ಕೇಂದ್ರದಲ್ಲಿ ಮತದಾನಕ್ಕೆ ಮೂರು ದಿನ ಅವಕಾಶ ಕಲ್ಪಿಸಿ ಕೊಟ್ಟಿದೆ.
ಸಕ್ಕೆ ಮಹಿಳಾ ಮತದಾರರಿಗೆ ವಿಶೇಷ ಮತಗಟ್ಟೆಯಲ್ಲಿ ಮಹಿಳೆಯರಿಗೆ ಮಹಿಳಾ ಅಧಿಕಾರಿಗಳನ್ನು ನಿರ್ಮಿಸಲಾಗಿದೆ ಮತ್ತು ಅದರ ಜೊತೆಗೆ ಹೊಸದಾಗಿ ಯಂಗ ಮತದಾರರಿಗೆ ಉತ್ಸಾಹ ತುಂಬಲು ವಿಶೇಷ ಮಾದರಿ ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ. 18 ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯ ಶೌಚಾಲಯ. ನೀರು. ವಿದ್ಯುತ್. ಸಂಪೂರ್ಣವಾಗಿ ವ್ಯವಸ್ಥೆ ಮಾಡಲಾಗಿದೆ.
ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ರಾಜಕೀಯ ಸಭೆ ಸಮಾರಂಭಗಳಿಗೆ ಅನುಮತಿ ಕಡ್ಡಾಯವಾಗಿದೆ. ಸುವಿದ ಯ್ಯಾಪ ನಲ್ಲಿ ನೀವು ಡೌನ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲಾಂದ್ರೆ ಅರ್ಜಿ ಮುಖಾಂತರ ಕಚೇರಿಗೆ ಬಂದು ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು 95 ಲಕ್ಷದವರೆಗೆ ಖರ್ಚನ್ನು ಮಾಡಬಹುದು.
ಮತದಾರರಿಗೆ ಆಮಿಷ ಒಡ್ಡುವ ವಿಷಯ ಮತ್ತು ಹಣ ಸರಾಯಿ ಮತದಾರರಿಗೆ ಆಮಿಷ ಒಡ್ಡುವ ವಿಷಯ ಯಾರಿಗಾದರೂ ಕಂಡು ಬಂದಲ್ಲಿ ಕೂಡಲೇ ವಿಜಿಲ್ ಯ್ಯಾಪ ಮುಖಾಂತರ ನೀವು ಚುನಾವಣೆ ಅಧಿಕಾರಿಗಳಿಗೆ ಅಪ್ಲೋಡ್ ಮಾಡಬಹುದು ಮಾಡಿದ ತಕ್ಷಣವೇ ನಮ್ಮ ಅಧಿಕಾರಿಗಳು ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸುತ್ತೇವೆ.
ಒಟ್ಟಾರೆ ಕ್ಷೇತ್ರದಲ್ಲಿ ಪೊಲೀಸ್ ಬಿಗಿ ಭದ್ರತೆ ಮತ್ತು ಯಾವುದೇ ಅಪರಾಧಕ್ಕೆ ಅವಕಾಶ ಇರೋದಿಲ್ಲ ಎಂದು ಸಾಹಾಯಕ ಚುನಾವಣೆ ಅಧಿಕಾರಿ ಸಾಜೀತ ಮುಲ್ಲಾ ಹೇಳಿದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ ಗಿರೀಶ ಸ್ವಾದಿ ಸಂಜಯಕುಮಾರ ಬಳಗಾರ ಎಸ ಬಿ ಕಾಂಬಳೆ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ