Breaking News: ನಿಷೇಧಿತ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದವರ ಎಡೆಮುರಿ ಕಟ್ಟಿದ CCB!

ಬೆಂಗಳೂರು:- ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಿಷೇಧಿತ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಕೈಸರ್ ಪಾಷಾ, ರಬಿಲ್ ಷರೀಫ್, ಮಹಮ್ಮದ್ ಅದ್ನಾನ್ ಬಂಧಿತರು ಎನ್ನಲಾಗಿದೆ. ಇ ಸಿಗರೇಟ್ ಗಳನ್ನು ಶೇಖರಿಸಿಟ್ಟು ಆರೋಪಿಗಳು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ನಿಷೇಧಿತ ಗಾಂಜಾ ಪತ್ತೆಯಾಗಿದೆ. ಬಂಧಿತರಿಂದ 30 ಲಕ್ಷ ಮೌಲ್ಯದ ಇ-ಸಿಗರೇಟ್‌ಗಳು ವಶಕ್ಕೆ ಪಡೆಯಲಾಗಿದ್ದು, ಗೋವಿಂದಪುರ ಪೊಲೀಸ್ ಠಾಣೆಯಲ್ಲಿ … Continue reading Breaking News: ನಿಷೇಧಿತ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದವರ ಎಡೆಮುರಿ ಕಟ್ಟಿದ CCB!