ವಾಷಿಂಗ್ಟನ್ : ಪ್ರಪಂಚಾದ್ಯಂತ ಕೊರೋನಾ ವೈರಸ್ ಮಹಾ ಸ್ಫೋಟ ಉಂಟಾಗಿದೆ. ಸೋಮವಾರ ಒಂದೇ ದಿನ ವಿಶ್ವಾದ್ಯಂತ ದಾಖಲೆಯ 14.4 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 2019ರಲ್ಲಿ ಮೊದಲ ಬಾರಿ ಕೋವಿಡ್ ಕೇಸು ಪತ್ತೆಯಾದ ಬಳಿಕ ಯಾವುದೇ ಒಂದು ದಿನದಲ್ಲಿ ಇಷ್ಟುಕೇಸು ಪತ್ತೆಯಾಗಿದ್ದು ಇದೇ ಮೊದಲು. ಇಷ್ಟೊಂದು ಪ್ರಮಾಣದಲ್ಲಿ ಕೇಸುಗಳು ಏರಲು ಕೋವಿಡ್ ಹೊಸ ತಳಿ ಒಮಿಕ್ರೋನ್ ಕಾರಣ ಎಂದು ಹೇಳಲಾಗಿದೆ.
ತೀವ್ರತೆ ಕಡಿಮೆ ಇದ್ದರೂ ಅತ್ಯಂತ ಸಾಂಕ್ರಾಮಿಕ ಎಂಬ ಕುಖ್ಯಾತಿ ಹೊಂದಿರುವ ಒಮಿಕ್ರೋನ್ ರೂಪಾಂತರಿ ಕೋವಿಡ್ ವೈರಸ್, ಜಾಗ ತಿಕ ಮಟ್ಟದಲ್ಲಿ ತನ್ನ ಹಾವಳಿಯನ್ನು ಸಾಬೀತುಪಡಿಸಿದೆ. ಪತ್ತೆಯಾದ ಎಲ್ಲಾ ಪ್ರಕರಣಗಳು ಒಮಿಕ್ರೋನ್ ಎಂದು ದೃಢಪಟ್ಟಿಲ್ಲ ವಾದರೂ, ಸೋಂಕಿನ ಪ್ರಮಾಣ ಏರಿಕೆಗೆ ಒಮಿಕ್ರೋನ್ ಕಾರಣ ಎಂಬುದನ್ನು ಅಂಕಿ ಅಂಶಗಳು ಸಾಬೀತುಪಡಿಸಿವೆ. ಕಳೆದ 1 ವಾರದಲ್ಲಿ ನಿತ್ಯ ಸರಾಸರಿ 8.41 ಲಕ್ಷ ಪ್ರಕರಣಗಳು ವರದಿಯಾಗಿವೆ.

ನ.24ರಂದು ಆಫ್ರಿಕಾದಲ್ಲಿ ಮೊದಲ ಒಮಿಕ್ರೋನ್ ಪತ್ತೆಯಾದ ವಾರಕ್ಕೆ ಹೋಲಿಸಿದರೆ, ಸರಾಸರಿ ವಾರದ ಕೋವಿಡ್ ಪ್ರಮಾಣದಲ್ಲಿ ಶೇ.49ರಷ್ಟುಏರಿಕೆಯಾದಂತಾಗಿದೆ. ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ದೇಶಗಳಲ್ಲಿ ಅಮೆರಿಕ ಅಗ್ರಸ್ಥಾನಿಯಾಗಿದ್ದು ನಿತ್ಯ ಸರಾಸರಿ 1.76 ಲಕ್ಷ ಪ್ರಕರಣ ದಾಖಲಾಗತೊಡಗಿವೆ. ಸೋಮವಾರ 2.28 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದು ಈ ವರ್ಷದ ಜ.8ರ ನಂತರದ ಗರಿಷ್ಠವಾಗಿದೆ. ನಂತರದ ಸ್ಥಾನದಲ್ಲಿರುವ ಬ್ರಿಟನ್‌ನಲ್ಲಿ ನಿತ್ಯ ಸುಮಾರು 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.
ಫ್ರಾನ್ಸ್‌ನಲ್ಲೂ 2 ದಿನದ ಹಿಂದೆ 1 ಲಕ್ಷ ಪ್ರಕರಣ ದಾಖಲಾಗಿದ್ದವು. ಆಸ್ಪ್ರೇಲಿಯಾ, ಥಾಯ್ಲೆಂಡ್‌ನಲ್ಲೂ ಒಮಿಕ್ರೋನ್ ಕಾರಣದಿಂದ ಕೋವಿ ಡ್ ಹೆಚ್ಚುತ್ತಿದೆ. ಒಮಿಕ್ರೋನ್ ಹೆಚ್ಚಳ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ 11500ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿದೆ. ಆದರೆ ಸಮಾ ಧಾನದ ವಿಷಯವೆಂದರೆ ಡೆಲ್ಟಾಗಿಂತ ಒಮಿಕ್ರೋನ್ 3 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದ್ದರೂ, ಹೆಚ್ಚು ಪ್ರಾಣಾಂತಿಕವಲ್ಲ ಹಾಗೂ ತೀವ್ರತರದ ಸೋಂಕು ಉಂಟು ಮಾಡಲ್ಲ ಎಂಬುದು ಈವರೆಗಿನ ಅಧ್ಯಯನದಲ್ಲಿ ತಿಳಿದುಬಂದಿದೆ.