ಬೆಂಗಳೂರು: ಹಸುಗೂಸುಗಳ ಮಾರಾಟ ಜಾಲದ ಬಂಧನ ಕೇಸ್ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ..ಇದೀಗ ಮತ್ತಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಬಂಧಿತ 10 ಆರೋಪಿಗಳನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದು ಮಹತ್ವದ ಮಾಹಿತಿ ಹೊರುತ್ತವೆ. ಈ ಕುರಿತ ರಿಪೋರ್ಟ್ ಇಲ್ಲಿದೆ ಇದೆ ನೋಡಿ .
ಎಳೆ ಮಕ್ಕಳ ಮಾರಾಟ ದಂಧೆ ಬೆಳಕಿಗೆ ಬಂದಿದೆ ತಡ ಎಲ್ಲೆಡೆ ಆತಂಕ ಶುರುವಾಗಿದೆ. ಬಂಧಿತರ ವಿಚಾರಣೆ ವೇಳೆ ದಿನೆ ದಿನೆ ಹೊಸ ವಿಚಾರಗಳು ಬೆಳಕಿಗೆ ಬರ್ತಿವೆ. ಹಲವು ವರ್ಷಗಳಿಂದ ಪುಟ್ಟ ಪುಟ್ಟ ಕಂದಮ್ಮಗಳನ್ನ ಕರ್ನಾಟಕ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಕಳ್ಳಸಾಕಣಿಕೆ ಮಾಡ್ತಿದ್ದ ಈ ಕಿರಾತಕರು ಕೋಟಿ ಕೋಟಿ ಬಾಚಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಆರೋಪಿಗಳನ್ನ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ 6 ವರ್ಷಗಳಲ್ಲಿ ಬರೋಬ್ಬರಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟ ಮಾಡಿರೊದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಇನ್ನು ಕರ್ನಾಟಕದಲ್ಲಿ ಕೇವಲ 50-60 ಮಕ್ಕಳನ್ನು ಮಾರಾಟ ಮಾಡಿದ್ದು, ಉಳಿದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದಾರಂತೆ. ಸದ್ಯ ಕರ್ನಾಟಕದಲ್ಲಿ ಮಾರಾಟ ಆಗಿರೋ ಮಕ್ಕಳ ಬಗ್ಗೆ ಮಾಹಿತಿ ಕಲೆಹಾಕ್ತಾ ಇರೋ ಸಿಸಿಬಿಗೆ ಕೇವಲ ಹತ್ತು ಮಕ್ಕಳ ಬಗ್ಗೆ ಮಾಹಿತಿ ಸಿಕ್ಕಿದ್ದು ಉಳಿದ ಮಕ್ಕಳನ್ನು ಯಾರಿಗೆ ಕೊಟ್ಟಿದ್ದಾರೆ ಅಂತ ತನಿಖೆ ಮುಂದುವರೆಸಿದ್ದಾರೆ.
ಹೌದು.. ಇವ್ಳೆ ನೋಡಿ ಮಹಾಲಕ್ಷ್ಮಿ , ಕರ್ನಾಟಕದ ಮೇನ್ ಕಿಂಗ್ ಪಿನ್, ಕಮ್ ಗ್ಯಾಂಗ್ ಲೀಡರ್ ಮಹಾಲಕ್ಷ್ಮೀಯ ಕಥೆಯೇ ಒಂದು ರೋಚಕ. ಏನೂ ಇಲ್ಲದೆ ದುಡಿಮೆಗಂತ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಇವ್ಳು ಇವತ್ತು ಕೋಟ್ಯಾದೀಶೆ. ಅಷ್ಟಕ್ಕೂ ಈ ಮಹಾಲಕ್ಷ್ಮಿಯ ಓಲ್ಡ್ ಕಹಾನಿ ಹೇಳ್ತೀವಿ ಕೇಳಿ, 2015 ರಿಂದ 2017 ರವರೆಗೂ ಗಾರ್ಮೆಟ್ಸ್ ನಲ್ಲಿ ಕೇವಲ 8 ಸಾವಿರ ಸಂಬಳಕ್ಕೆ ಕೆಲಸ ಮಾಡ್ತಾ ಇದ್ಳು. ಈ ವೇಳೆ ಇಕೆಗೆ ಪರಿಚಯ ಆದ ಮಹಿಳೆಯೊಬ್ಬಳು ಅಂಡಾಣು ಕೊಟ್ಟರೇ ಹಣ ಕೊಡೋದಾಗಿ ಹೇಳಿದ್ಲಂತೆ. ಆಗ ಅಂಡಾಣು ನೀಡಿದ್ದ ಮಹಾಲಕ್ಷ್ಮೀಗೆ ಸುಮಾರು 20 ಸಾವಿರ ಮಹಿಳೆ ನೀಡಿದ್ದಳು. ಇನ್ನು ದುಡ್ಡಿನ ರುಚಿನೋಡಿದ ಮಹಾಲಕ್ಷ್ಮಿ ನಂತರ ದಿನಗಳಲ್ಲಿ ಅಂಡಾಣು ಕೊಡೋರನ್ನು ಪತ್ತೆ ಮಾಡಿ ಅದರಿಂದ ಕಮೀಷನ್ ಪಡೆಯೋ ಕೆಲಸ ಮಾಡ್ತಾಇದ್ನು. ಇನ್ನು 2017 ರಿಂದಲೂ ಈ ದಂಧೆಯನ್ನ ಶುರುಮಾಡಿದ್ದ ಮಹಾಲಕ್ಷ್ಮೀ , ಬಾಡಿಗೆ ಮನೆಯಲ್ಲಿ ಇದ್ದಾಕೆ ಹೆಸರಿಗೆ ತಕ್ಕಂತೆ ಇವತ್ತು ಸ್ವಂತ ಮನೆ, ಕಾರು ಜೊತೆಗೆ ಮೈತುಂಬಾ ಚಿನ್ನಾಭರಣ ಮಾಡಿಸಿಕೊಂಡು ಜುಮ್ ಅಂತ ಇದ್ದಾಳೆ.
ಇನ್ನು ಮಕ್ಕಳ ಮಾರಟ ಜಾಲದಲ್ಲಿದ್ದ ಮತ್ತಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.. ಆರ್ ಟಿ ನಗರದ ನಿವಾಸಿ ಕೆವಿನ್ ಅರ್ಧಕ್ಕೆ ಓದು ನಿಲ್ಲಿಸಿ ರಾಜಾಜಿನಗರದಲ್ಲಿ ಕ್ಲಿಕ್ ಒಂದನ್ನು ತೆರೆದಿದ್ದ. ಈತ ಮಾಡುತ್ತಿದ್ದ ಕೆಲಸ ಏನೂ ಅಂದ್ರೆ ಮಾಟವಾದ ಮಕ್ಕಳಿಗೆ ಜನನ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲೆಗಳನ್ನು ರೆಡಿ ಮಾಡಿಕೊಲು ಸಹಾಯ ಮಾಡುತ್ತಿದ್ದ… ಇನ್ನು ಬಂಧಿತ ರಮ್ಯ ಕೂಡ ಮಕ್ಕಳಮಾರಾಟದ ಜೆಂಟ್ ಆಗಿ ಕೆಲಸ ಮಾಡುತ್ತಿದ್ಲು. ಮೊದಲಿಗೆ ತನ್ನ ಮಗುವನ್ನು ಮಾರಾಟ ಮಾಡಿ ಹಣ ಮಾಡಿದ್ದ ಈಕೆ ನಂತರ ತನ್ನ ಮಗಳ ಮಗುವನ್ನೂ ಮಾರಾಟ ಮಾಡಿಸಿದ್ಲಂತೆ.ನಂತರ ತನ್ನ ಸಂಬಂಧಿಕರ ಯುವತಿ ಅಬಾರ್ಷನ್ ಮಾಡಿಸಬೇಕು ಎಂದು ಬಂದಾಗ ಕೆಯನ್ನು ಮಗು ಹೆರುವಂತೆ ಮನವೊಲಿಸಿ ನಂತರ ಮಗು ಮಾರಟ ಮಾಡಿರೋದಾಗಿ ಬಾಯಿ ಬಿಟ್ಟಿದ್ದಾರೆ…
ಸದ್ಯ ಕಿಂಗ್ ಪಿನ್ ಮಹಾಲಕ್ಷ್ಮಿ ಮಾಡಿದ ಪಾಪದ ಕೊಡ ತುಂಬಿಹೋಗಿದೆ. ಕ್ಲೂಸಿಕ್ಕಿದ್ದೆ ಸಿಕ್ಕಿದ್ದು, ಸಿಸಿಬಿ ಫುಲ್ ಗ್ರಿಲ್ ಮಾಡ್ತಿದ್ದಾರೆ. ಮಹಾಲಕ್ಷ್ಮಿ ಸೇರಿದಂತ ಆರೋಪಿಗಳನ್ನ ವಿಚಾರಣೆ ನಡೆಸುತ್ತಿರೊ ಸಿಸಿಬಿ ಇನ್ಯಾವ ಹೊಸ ವಿಚಾರ ಬೆಳಕಿಗೆ ತರ್ತಾರೋ ಕಾದುನೋಡಬೇಕು..