ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಕರಿಕಲ್ಲು ಕ್ವಾರಿಗಳೇ ಹೆಚ್ಚು ಇರುವ ನಂಜೇದೇವನಪುರ, ವೀರನಪುರ , ಉಡಿಗಾಲ ,ಕೊತ್ತಲವಾಡಿ ಗ್ರಾಮಗಳ ಸುತ್ತಾಮುತ್ತಾ ಚಿರತೆಗಳ ಉಪಟಳ ಹೆಚ್ಚಾಗಿತ್ತು . ಪ್ರತಿನಿತ್ಯ ಹಗಲು ವೇಳೆಯಲ್ಲಿಯೇ ಚಿರತೆಗಳು ರೈತರ ಜಮೀನುಗಳಿಗೆ ದಾಳಿ ಇಟ್ಟು ಜಾನುವಾರುಗಳನ್ನು ಕೊಂದುತೇಗುತ್ವೀದ್ದವು. ಇದರಿಂದ ರೈತರು ಪ್ರತಿನಿತ್ಯ ಜಮೀನುಗಳಿಗೆ ತೆರಳಲು ಭಯಪಡ್ತಾ ಇದ್ರು. ಇದೀಗ ಬಿ.ಆರ್.ಟಿ. ಅರಣ್ಯದ ಸಿಬ್ಬಂಧಿಗಳು ವೀರನಪುರ ಗ್ರಾಮದ ಬಳಿ ಬೋನು ಇಟ್ಟು ಸುಮಾರು 3 ವರ್ಷ ಪ್ರಾಯದ ಗಂಡು ಚಿರತೆ ಸೆರೆ ಹಿಡಿದು ಬಿ.ಆರ್.ಟಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ಹಾಗಾಗಿ ಐದು ತಿಂಗಳಲ್ಲಿ ಆರು ಚಿರತೆ ಸಿರೆ ಹಿಡಿದಂತಾಗಿದೆ
