ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu Kashmir) ಸಂವಿಧಾನದ 370ನೇ ವಿಧಿಯ (Article 370) ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು (Special Status) ರದ್ದು ಪಡಿಸಿದ ಕೇಂದ್ರ ಸರ್ಕಾರ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಮುಕ್ತಾಯಗೊಳಿಸಿರುವ ಸುಪ್ರೀಂಕೋರ್ಟ್ (Supreme Court) ಇಂದು ತೀರ್ಪು ನೀಡಲಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್,
ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು ತೀರ್ಪು ಪ್ರಕಟಿಸಲಿದೆ. ಆಗಸ್ಟ್ನಲ್ಲಿ ಆರಂಭವಾದ 16 ದಿನಗಳ ಮ್ಯಾರಥಾನ್ ವಿಚಾರಣೆಯ ಬಳಿಕ ಪೀಠವು ಸೆಪ್ಟೆಂಬರ್ 5 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಆರ್ಟಿಕಲ್ 370, ಆರ್ಟಿಕಲ್ 35A ಭಾರತದ ಸಂವಿಧಾನದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು. ದು ಪ್ರತ್ಯೇಕ ಸಂವಿಧಾನ ಮತ್ತು ಇತರ ಕಾನೂನು ವ್ಯತ್ಯಾಸಗಳ ನಡುವೆ ಪ್ರತ್ಯೇಕ ದಂಡ ಸಂಹಿತೆಯನ್ನು ಹೊಂದಲು ಅನುವು ಮಾಡಿಕೊಡುತ್ತದೆ.
ಬಾಡಿಗೆ ಬೈಕ್’ನಲ್ಲಿ 330km ಪ್ರಯಾಣಿಸಿ ವಿಧಾನಸಭೆಗೆ ತೆರಳಿದ ಜನಪ್ರತಿನಿಧಿ!
ಇದನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದು ಕಾನೂನು ಉಲ್ಲಂಘನೆ ಎಂದು ಅರ್ಜಿದಾರರು ವಾದಿಸಿದ್ದರು. ಅರ್ಜಿದಾರರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ನಾಯಕರು ಸೇರಿದ್ದಾರೆ. ವಿಚಾರಣೆಯ ವೇಳೆ, ಕೇಂದ್ರವು ತನ್ನ ಲಾಭಕ್ಕಾಗಿ ಎಲ್ಲವನ್ನೂ ಮಾಡುತ್ತಿದೆ ಮತ್ತು ನೆಲದ ನಿಯಮಕ್ಕೆ ಬದ್ಧವಾಗಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು. ವಾದ, ಪ್ರತಿ ವಾದ ಕೇಳಿದ್ದ ಸುಪ್ರೀಂಕೋರ್ಟ್ ಆರ್ಟಿಕಲ್ 370 ರದ್ದು ಮಾಡಿದ ನಿರ್ಧಾರ ಸರಿಯೇ? ತಪ್ಪೇ ಇಂದು ತನ್ನ ಆದೇಶದಲ್ಲಿ ತಿಳಿಸಲಿದೆ.