ವಿಜಯಪುರ : ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ, ಪಕ್ಷದ ಸಂಘಟನೆಯಲ್ಲಿ ಬದಲಾವಣೆಯಾಗಲಿದೆ. ವಿಧಾನ ಸಭೆ ಚುನಾವಣೆಗೆ ಪಕ್ಷವನ್ನು ಬಲ ಪಡೆಸಲು ಬದಲಾವಣೆಯಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಬಗ್ಗೆ ವಿಜಯಪುರದಲ್ಲಿ ಶಾಸಕ ಯತ್ನಾಳ್ ಮಾತನಾಡಿ, ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ, ಪಕ್ಷದ ಸಂಘಟನೆಯಲ್ಲಿ ಬದಲಾವಣೆಯಾಗಲಿದೆ.
ವಿಧಾನ ಸಭೆ ಚುನಾವಣೆಗೆ ಪಕ್ಷವನ್ನ ಬಲ ಪಡೆಸಲು ಬದಲಾವಣೆಯಾಗಲಿದೆ. ಪ್ರಧಾನಿಗಳ ಗುಪ್ತಚರ ಇಲಾಖೆ ಎಲ್ಲವನ್ನೂ ನೋಡುತ್ತಿದೆ. ಕಚೇರಿಗೆ ಹೋಗದ ಸಚಿವರು ಯಾರು? ಸೇರಿ ಎಲ್ಲ ಬೆಳವಣಿಗೆಯನ್ನು ಪ್ರಧಾನಮಂತ್ರಿಗಳು ಗಮನಿಸುತ್ತಿದ್ದಾರೆ. ಸಂಕ್ರಾಂತಿ ಬಳಿಕ ಪ್ರಧಾನಿ ನರೇಂದ್ರ ಮೋದಿ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷದಲ್ಲಿ, ಸರ್ಕಾರದಲ್ಲಿ ಮೋದಿ ಬದಲಾವಣೆ ಮಾಡಲಿದ್ದಾರೆ ಎಂದು ತಿಳಿಸಿದ್ಧಾರೆ.

“ಕಳೆದ ಸಂಕ್ರಾಂತಿಗೆ ಹೇಳಿದ್ದೆ ಒಂದು ವಿಕೆಟ್ ಹಾರಿತ್ತು, ಈ ಬಾರಿಯೂ ಸಂಕ್ರಾಂತಿಯ ವರೆಗೆ ತಡೆಯಿರಿ ಎಂದು ಯತ್ನಾಳ್ ಹೇಳಿದ್ದಾರೆ. ಈ ವೇಳೆ ಸಿಎಂ ಫಾರಿನ್ ಟೂರ್ ವದಂತಿ ವಿಚಾರವಾಗಿ ಮಾತನಾಡಿ, ಅವರ ವೀಸಾ ಬಂದಿದ್ದರೆ ನನಗೆ ತೋರಿಸಿ, ಸಿಎಂ ಫಾರಿನ್ ಟೂರ್ ಇಲ್ಲ. ಇದ್ದರೆ ಗೊತ್ತಾಗುತ್ತಿತ್ತು. ಸಿಎಂ ಪ್ರವಾಸ, ಚಲನವಲನ ಸಾರ್ವಜನಿಕವಾಗಿರುತ್ತೆ. ನಾನು ಸಿಎಂ ಬದಲಾವಣೆ ಬೇಡ ಅನ್ನೋದು ಇಲ್ಲ. ಬೇಕು ಅನ್ನೋದು ಇಲ್ಲ. ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಯತ್ನಾಳ್ ಮತ್ತೆ ಸಚಿವ ಸ್ಥಾನದ ಆಸೆ ಹೊರಹಾಕಿದ್ದು, ಗಟ್ಸ್ ಇರೋರು ಗೃಹ ಸಚಿವರಾಗಬೇಕು . ನಮ್ಮಂತವರ ಕೈಯಲ್ಲಿ ಕೊಟ್ಟರೆ ಬರೊಬ್ಬರಿ ಮಾಡುತ್ತೇವೆ. ದೇಶವಿರೋಧಿ ಚಟುವಟಿಕೆ ಮಾಡೋರನ್ನ, ಉಪಾದ್ಯಪಿಗಳಿಗೆ ಸರಿಯಾಗಿ ಮಾಡುತ್ತೇವೆ . ಈಗಿನ ಗೃಹ ಮಂತ್ರಿ ಒಳ್ಳೆಯವರು, ಪ್ರಾಮಾಣಿಕರು, ಅರಗ ಜ್ಞಾನೇಂದ್ರ ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿಗೆ ಸೂಕ್ತರಿದ್ದಾರೆ ಎಂದು ಹೇಳಿದ್ದಾರೆ.