ಧಾರವಾಡ :ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಲಾರಿ ಹೊತ್ತಿ ಉರಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬೆಳ ವಟಗಿ ಕ್ರಾಸ್ ಬಳಿ ರಸ್ತೆಯಲ್ಲಿ ನಡೆದಿದೆ. ಶಿವಯೋಗಪ್ಪ ಬೆಣ್ಣಿ ಎಂಬುವವರ ಲಾರಿ ಬೆಂಕಿಗಾಹುತಿ ಆಗಿದೆ. ಗೋವಿನ ಜೋಳ ಸಾಗಿಸು ತ್ತಿದ್ದಾಗ ಲಾರಿ ಹೊತ್ತಿ ಉರಿದಿದೆ. ಚಾಲಕ, ಕ್ಲೀನರ್ ಲಾರಿಯಿಂದ ಜಿಗಿದು ಬಚಾವ್ ಆಗಿದ್ದಾರೆ. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
