ನ್ಯೂಯಾರ್ಕ್: ಫುಡ್ ಡೆಲಿವರಿ ಕೊಡುವ ಡೆಲಿವರಿ ಬಾಯ್ಗಳ ಮೇಲೆ ಆಗಾಗ ಹಲ್ಲೆಗಳು ನಡೆಯುವ ಘಟನೆಗಳು ಬಯಲಾಗುತ್ತಲೇ ಇರುತ್ತವೆ. ಫುಡ್ ಡೆಲಿವರಿ ಕೊಡುವುದು ತಡವಾಯಿತೆಂದೋ, ತಪ್ಪಾದ ಆಹಾರವನ್ನು ಡೆಲಿವರಿ ನೀಡಿದರೆಂದೋ ಆನ್ಲೈನ್ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಯುತ್ತಲೇ ಇರುತ್ತದೆ. ಇದೀಗ ನ್ಯೂಯಾರ್ಕ್ ನಗರದ ಬರ್ಗರ್ ಕಿಂಗ್ ಔಟ್‌ಲೆಟ್‌ನಲ್ಲಿ ಉದ್ಯೋಗಿಯೊಬ್ಬರು ಫುಡ್ ಕೊಡುವುದು ತಡ ಮಾಡಿದ್ದಕ್ಕೆ ಇತ್ತೀಚೆಗೆ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಬರ್ಗರ್ ಕಿಂಗ್ ಶಾಪ್ನಲ್ಲಿ ಫುಡ್ ಆರ್ಡರ್ ಮಾಡಿದ್ದ ಇಬ್ಬರು ಫುಡ್ ಡೆಲಿವರಿ ಕೊಡುವುದು ತಡವಾಗಿದ್ದಕ್ಕೆ ಶಾಪ್ನವರ ಜೊತೆ ಜಗಳವಾಡಿದ್ದರು. ನ್ಯೂಯಾರ್ಕ್ನ ಬ್ರೂಕ್ಲಿನ್‌ನ ಲಿಂಡೆನ್ ಬೌಲೆವಾರ್ಡ್‌ನಲ್ಲಿರುವ ಔಟ್‌ಲೆಟ್‌ನಲ್ಲಿ ಡಿಸೆಂಬರ್ 4ರಂದು ಈ ಘಟನೆ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವ್ಯಕ್ತಿಯೊಬ್ಬರು ರೆಸ್ಟೋರೆಂಟ್‌ನಲ್ಲಿನ ಕೌಂಟರ್‌ನಿಂದ ಜಿಗಿದು ನೌಕರನನ್ನು ಹಿಡಿದುಕೊಂಡಿದ್ದರು.

🚨WANTED for ASSAULT: Do you know these guys? On 12/4/21 at approx 6:14 PM, inside of 1661 Linden Blvd in Brooklyn, the suspects engaged in a dispute with a 22-year-old male, then punched him multiple times while displaying a knife. Any info? DM @NYPDTips or call 800-577-TIPS. pic.twitter.com/Y843eiAWkU
— NYPD NEWS (@NYPDnews) January 4, 2022
ಕೌಂಟರ್‌ನಲ್ಲಿ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ಮತ್ತು ಅವನ ಸಹಚರ ಇಬ್ಬರೂ ಬರ್ಗರ್ ಕಿಂಗ್ ನೌಕರನಿಗೆ ಗುದ್ದುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಬರ್ಗರ್ ಕಿಂಗ್ ಔಟ್ಲೆಟ್ನಲ್ಲಿನ ಇತರ ಸಿಬ್ಬಂದಿಗಳು ಓಡಿಬಂದು ತಮ್ಮ ಸಿಬ್ಬಂದಿಯನ್ನು ಕಾಪಾಡಿದರು. ಇಬ್ಬರೂ ಶಂಕಿತರು ಹೆಡ್ ಜಾಕೆಟ್‌ಗಳು ಮತ್ತು ಮಾಸ್ಕ್ ಧರಿಸಿದ್ದರು. ಈ ಹಲ್ಲೆಯ ನಂತರ ರೆಸ್ಟೋರೆಂಟ್‌ನಿಂದ ಹೊರನಡೆದರು.