ಹುಬ್ಬಳ್ಳಿ: ಸಿಲಿಂಡರ್ ತುಂಬಿದ ವಾಹನಕ್ಕೆ ಬುಲೆಟ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರಿಗೆ ಗಂಭೀರ ಗಾಯವಾದ ಘಟನೆ ನಗರದ ಕೆಎಸ್ ಆರ್ ಪಿ ಕಚೇರಿ ಬಳಿ ತಡರಾತ್ರಿ ನಡೆದಿದೆ.
ಧಾರವಾಡದಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಬುಲೆಟ್ ಬೈಕ್ ಸವಾರ ಮುಂದೆ ಹೋಗುತ್ತಿದ್ದ ಸಿಲಿಂಡರ್ ತುಂಬಿದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಬೈಕ್ ಹೊಡೆಯುತ್ತಿದ್ದ ಯುವಕ ಹಿಂಬದಿ ಕುಳಿತ ಯುವತಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರ ಸಹಾಯದಿಂದ ಗಾಯಾಳು ಆಸ್ಪತ್ರೆಗೆ ದಾಖಲಿಸಲಾಗಿದೆ.