ಸ್ಯಾಂಡಲ್ವುಡ್ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಟಾರ್ ಹೀರೋಯಿನ್. ಇತ್ತೀಚಿನ ದಿನಗಳಲ್ಲಿ ರಚಿತಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಎರಡು ಸಿನಿಮಾ ಮಾಡಿ ಹಿಟ್ ಆದ ಮೇಲೆ ಟಾಲಿವುಡ್ಗೆ ಹಾರೋ ಇಂದಿನ ಕಾಲದಲ್ಲಿ, ರಚಿತಾ ಮಾತ್ರ ಯಾಕೆ ಬೇರೆ ಭಾಷೆಗೆ ಕಾಲಿಟ್ಟಿಲ್ಲ ಅಂತ ಸಾಕಷ್ಟು ಮಂದಿ ಅಂದುಕೊಂಡಿದ್ದರು. ಸದ್ಯ ಆ ಪ್ರಶ್ನೆಗೆ ರಚಿತಾ ಉತ್ತರ ನೀಡಿದ್ದು, ಟಾಲಿವುಡ್ಗೆ ಗ್ರ್ಯಾಂಡ್ ಎಂಟ್ರಿ ನೀಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ರಚಿತಾ ರಾಮ್ ನಟನೆಯ ತೆಲುಗಿನ ಮೊಟ್ಟ ಮೊದಲ ಸಿನಿಮಾ ‘ಸೂಪರ್ ಮಚ್ಚಿ’ ಸಿನಿಮಾ ಅನ್ನೋದು ಗೊತ್ತು. ಆದರೆ ಈಗ ಅಪ್ಡೇಟ್ ಏನಂದ್ರೆ ರಚಿತಾ ರಾಮ್ರ ಮೊದಲ ತೆಲುಗು ‘ಸೂಪರ್ ಮಚ್ಚಿ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸ್ಯಾಂಡಲ್ವುಡ್ ಮತ್ತು ಟಾಲಿವುಡ್ ಚಿತ್ರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ವುಡ್ ಮಂದಿಗೆ ರಚಿತಾ ನಟನೆಯ ಬಗ್ಗೆ ಗೊತ್ತಿದೆ. ಆದರೆ ಟಾಲಿವುಡ್ ಮಂದಿಗೆ ರಚಿತಾ ಹೇಗೆ ತಮ್ಮ ನಟನೆಯನ್ನು ಒಪ್ಪಿಸಿತ್ತಾರೋ ಗೊತ್ತಿಲ್ಲ.

ಆದರೆ ಸದ್ಯಕ್ಕೆ ರಿಲೀಸ್ ಆಗಿರುವ ‘ಸೂಪರ್ ಮಚ್ಚಿ’ ಸಿನಿಮಾದ ಟ್ರೈಲರ್ ಅದ್ಭುತವಾಗಿ ಮೂಡಿ ಬಂದಿದ್ದು, ರಚಿತಾ ನಟನೆಯ ಬಗ್ಗೆಯೂ ಉತ್ತಮ ಪ್ರತಿಕ್ರಿಯೆ ಕೇಳಿ ಬಂದಿದೆ. ಇನ್ನು ‘ಸೂಪರ್ ಮಚ್ಚಿ’ ಸಿನಿಮಾದ ನಾಯಕ ಕಲ್ಯಾಣ್ ದೇವ್. ‘ಸೂಪರ್ ಮಚ್ಚಿ’ ಸಿನಿಮಾಗೆ ಪುಲಿ ವಾಸುದೇವ್ ಆಯಕ್ಷನ್ ಕಟ್ ಹೇಳಿದ್ದು, ರಿಜ್ವಾನ್ ಬಂಡವಾಳ ಹೂಡಿದ್ದಾರೆ. ಎಸ್. ಎಸ್ ತಮನ್ ಮ್ಯೂಸಿಕ್ ನೀಡಿದ್ದಾರೆ. ಎಲ್ಲಾ ಅಂದು ಕೊಂಡಂತೆ ಆದರೆ, ಇದೇ ತಿಂಗಳ 14ನೇ ತಾರೀಖು ಸೂಪರ್ ಮಚ್ಚಿ ರಿಲೀಸ್ ಆಗಲಿದೆ.