ಹುಬ್ಬಳ್ಳಿ:– ಎಮ್ಮೆಗಳ ಅಲಂಕಾರಕ್ಕೆ ಕವಡೆ ಸರ, ಕೋಡು ಕೊಂಬುಗಳಿಗೆ ತುರಾಯಿಗಳು, ಹೊಸ ಹಗ್ಗಗಳು, ಕೋಡುಗಳಿಗೆ ಹೊಸ ಬಣ್ಣ ಬಳಿಯುವುದು ಹೀಗೆ ದೀಪಾವಳಿ ಹಬ್ಬವನ್ನ ಗೌಳಿಗ ಸಮಾಜದವರು ಅತ್ಯಂತ ವಿಶೇಷವಾಗಿ ಆಚರಣೆ ಮಾಡಿದರು. ಈ ಕುರಿತು ಒಂದು ವರದಿ..
ದೀಪಾವಳಿ ಹಬ್ಬದಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೌಳಿಗರ ಉತ್ಸಾಹಕ್ಕೆ ಎಲ್ಲೆ ಇಲ್ಲ.
ಅವರು ತಮ್ಮ ಮಕ್ಕಳಗಿಂತಲೂ ಹೆಚ್ಚಾಗಿ ಪ್ರೀತಿಯಿಂದ ಜೋಪಾನ ಮಾಡಿರುವ ಎಮ್ಮೆಯನ್ನ ಶೃಂಗಾರ ಮಾಡಿ ಓಡಿಸಿದ ಸಂಭ್ರಮಕ್ಕೆ ಪಾರವೇ ಇರಲಿಲ್ಲ.ಉತ್ತರ ಭಾರತದಿಂದ ಬಂದ ಯಾದವರು ಹಣಬರ ಸಮುದಾಯದವರು ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಮಲೆನಾಡಿನ ಸೆರಗಿನಂತಿರುವ ಈ ಊರಿನಲ್ಲಿ ಯಾದವರ ಶ್ರಮದಿಂದಲೇ ಧಾರವಾಡ ಪೇಡೆ ಜನಪ್ರಿಯ ವಾಗಲು ಸಾಧ್ಯವಾಗಿದೆ ವರ್ಷವಿಡೀ ಹಾಲು ಕೊಟ್ಟು ಪೊರೆಯುವ ಎಮ್ಮೆಗಳಿಗೆ ಸಿಂಗಾರ ಮಾಡಿ, ದ್ವಾದಶಿಯಂದು ದೋಸೆ ಮಾಡಿ ನೈವೇದ್ಯ ಹಿಡಿದು ಬಲಿಪಾಡ್ಯಮಿಯ ದಿನ ಎಮ್ಮೆಗಳ ಓಟ ಏರ್ಪಡಿಸಲಾಗುತ್ತದೆ ಎನ್ನುತ್ತಾರೆ
ಗೌಳಿದ ಸಮಾಜ ಹಿರಿಯರು,
ನೆಹರು ಮೈದಾನದಲ್ಲಿ ಸಾಂಪ್ರದಾಯಿಕ ಪೂಜೆ ನಂತರ ಗೌಳಿ ಗಲ್ಲಿ, ಮರಾಠಾ ಗಲ್ಲಿ, ಕೊಪ್ಪೀಕರ್ ರಸ್ತೆ,ಮ್ಯಾದರ ಓಣಿ ನಡೆಯುವ ಎಮ್ಮೆಗಳ ಓಟದ ಸ್ಪರ್ಧೆ ಕಣ್ಮನಸೆಳೆಯಿತು.
ಎಮ್ಮೆಗಳ ಓಟದ ಸ್ಪರ್ಧೆ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಸಿಳ್ಳೆ, ಚಪ್ಪಾಳೆಗಳ ಸುರಿಮಳೆಗೈಯುವ ಮೂಲಕ ಎಮ್ಮೆಗಳನ್ನು ಹುರಿದುಂಬಿಸುತ್ತಾರೆ. ‘ಎಮ್ಮೆಗಳ ಫ್ಯಾಷನ್ ಷೋ’ ಅನ್ನು ತಮ್ಮ ಮೊಬೈಲ್, ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಂಭ್ರಮದಲ್ಲಿ ಮಿಂದೆಂದು ಎದ್ದರು.
‘ಎಮ್ಮೆಗಳು ನಮಗೆ ವರ್ಷವಿಡೀ ಅನ್ನ ಹಾಕುತ್ತವೆ. ಪ್ರತಿವರ್ಷ ದೀಪಾವಳಿಯಲ್ಲಿ ಅವುಗಳನ್ನು ಅಲಂಕರಿಸಿ ಕುಟುಂಬಸ್ಥರೆಲ್ಲ ಪೂಜಿಸುತ್ತೇವೆ. ವಿವಿಧ ಬಡಾವಣೆಗಳಲ್ಲಿ ಓಡಿಸಿ ಸಂತಸಪಡುತ್ತೇವೆ. ಹಲವು ದಶಕಗಳಿಂದ ಈ ಆಚರಣೆ ಮುಂದುವರಿಸಿಕೊಂಡು ಬಂದಿದ್ದೇವೆ’ ಎನ್ನುತ್ತಾರೆ ಅರಣು ಶಿರ್ಕೆ, ವಿಠ್ಠಲ ಗಡೆಪ್ಪ, ನಿಂಗಪ್ಪ ಉಪ್ಪಾರ ಅವರು.
ಉತ್ತರ–ದಕ್ಷಿ ಬಹುಭಾಷಾ ಸಂಸ್ಕೃತಿ ಹೊಂದಿರುವ ಹುಬ್ಬಳ್ಳಿಯಲ್ಲಿ ಗುಜರಾತಿಗಳು, ಬಂಗಾಳಿಗಳು, ಬಿಹಾರಿಗಳು ಸೇರಿದಂತೆ ಉತ್ತರ ಭಾರತೀಯರು ಸಾವಿರಾರು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ದೀಪಾವಳಿಯಲ್ಲಿ ಅವರು ಸ್ಥಳೀಯ ಧಾರ್ಮಿಕ ಪದ್ಧತಿ ಅನುಸರಿಸುವ ಜತೆಗೆ, ತಮ್ಮ ನಾಡಿನ ಸಂಸ್ಕೃತಿಯನ್ನೂ ಅನಾವರಣ ಗೊಳಿಸಿದರು.