ಮಂಡ್ಯ: ಶಾಲಾ ತರಗತಿಗೆ ಮೊಬೈಲ್ ತಂದ ಒಂದೇ ಕಾರಣಕ್ಕೆ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ ಅವಮಾನವೀಯ ಘಟನೆ ಶ್ರೀರಂಗ ಪಟ್ಟಣ ತಾಲೂಕಿನಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ತರಗತಿಗೆ ಮೊಬೈಲ್ ತಂದಿದ್ದಾಳೆಂಬ ಒಂದೆ ಕಾರಣಕ್ಕೆ ಸ್ನೇಹಲತಾ ಎಂಬ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯನ್ನು ಬೇರೆ ಕೊಠಡಿಗೆ ಕರೆದೋಯ್ದು ಬೆತ್ತಲೆಗೊಳಿಸಿ ಕಿರುಕುಳ ನೀಡಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಇನ್ನು ಈ ಘಟನೆ ಒಂದು ವಾರದ ಹಿಂದೆ ನಡೆದಿದ್ದು, ಇದೀಗ ಪೋಷಕರು ಹಾಗೂ ಗ್ರಾಮಸ್ಥರು ಸೇರಿ ನೀಚ ಮುಖ್ಯ ಶಿಕ್ಷಕಿಯ ವಿರುದ್ದ ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಹಾಗೂ ಬಿಇಒ ಅನಂತರಾಜು ಅವರಿಗೆ ದೂರು ನೀಡುವ ಮೂಲಕ ಕ್ರಮಕ್ಕೆ ಒತ್ತಾಹಿಸಿದ್ದಾರೆ.
