ಬೆಂಗಳೂರಿನಲ್ಲಿ ಒಂಟಿ‌ ಮಹಿಳೆಯ ಬರ್ಬರ ಕೊಲೆ: ಪರಿಚಿತ ವ್ಯಕ್ತಿಯಿಂದಲೇ ಕೃತ್ಯ ಶಂಕೆ!?

ಬೆಂಗಳೂರು:- ಬೆಂಗಳೂರಿನಲ್ಲಿ ಒಂಟಿ‌ ಮಹಿಳೆ ಕೊಲೆ ನಡೆದಿರುವ ಘಟನೆ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ಜರುಗಿದೆ. ದೆಹಲಿಯಲ್ಲಿ ಅಪ್ರಾಪ್ತರಿಂದ ಫೈರಿಂಗ್: ಓರ್ವ ಸಾವು, ಮತ್ತೋರ್ವ ಗಂಭೀರ! ಕಳೆದ ರಾತ್ರಿ 1:30 ರ ಸುಮಾರಿಗೆ ಈ ಕೊಲೆ ನಡೆದಿದೆ. 45 ವರ್ಷದ ಜಯಮ್ಮ ಕೊಲೆಯಾಗಿರುವ ಮಹಿಳೆ ಎನ್ನಲಾಗಿದೆ. ಪರಿಚಿತ ವ್ಯಕ್ತಿಯಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಗೆ ಮೃತ ದೇಹ ಸೇಂಟ್ಸ್ ಜಾನ್ಸ್ ಆಸ್ಪತ್ರೆಗೆ ರವಾನೆ ‌ಮಾಡಲಾಗಿದೆ. ಸದ್ಯ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.