ಎರಡು ದೇಹ ಒಂದೇ ಮುಖವಿರುವ ವಿಚಿತ್ರ ಎಮ್ಮೆ ಕರುವೊಂದು ಜನನವಾಗಿರೋ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ನಡೆದಿದೆ. ಒಂದೇ ಮುಖ, ಎರೆಡು ದೇಹ, ಎಂಟು ಕಾಲು, ಮೂರು ಕಿವಿ ಹೊಂದಿದ ಎಮ್ಮೆ ಕರು ಜನನವಾಗಿದೆ, ಹಮ್ಮಿಗಿ ಗ್ರಾಮದ ಚಂದ್ರಪ್ಪ ಷಣ್ಮುಖಪ್ಪ ಈಟಿ ಅನ್ನೋರಿಗೆ ಸೇರಿದ ಎಮ್ಮೆ ಇದಾಗಿದೆ.
ನಿನ್ನೆ ರಾತ್ರಿಯಿಂದಲೇ ಕರುಗೆ ಜನ್ಮ ನೀಡಲು ತಾಯಿ ಎಮ್ಮೆ ಸಾಕಷ್ಟು ತೊಂದರೆ ಪಟ್ಟಿದೆ.ಇಂದು ಬೆಳಿಗ್ಗೆ ಪಶು ವೈದ್ಯರ ಮೂಲಕ ಕರು ಹೊರಕ್ಕೆ ತೆಗೆಯಲಾಗಿದ್ದು,ಕರು ಹೊರಬಂದ ಕೆಲ ಹೊತ್ತಿನಲ್ಲೆ ಹೆಣ್ಣುಕರು ಸಾವನ್ನಪ್ಪಿದೆ.

ವಿಚಿತ್ರ ಕರು ಜನನ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದ್ದು, ತಾಯಿ ಎಮ್ಮೆಗೆ ಸದ್ಯ ಪಶು ವೈದ್ಯರು ಚಿಕಿತ್ಸೆ ನಿಡಿದ್ದು, ಅಪಾಯದಿಂದ ಪಾರಾಗಿದೆ
