ಬೆಂಗಳೂರು: ಸಿಎಂ, ಸಚಿವರಿಗೆ ಮಾತ್ರವಲ್ಲ.. ಹೈಕಮಾಂಡ್ ಗೂ ಬಿ.ಆರ್ ಪಾಟೀಲ್ ತಲೆನೋವಾಗಿಬಿಟ್ಟಿದ್ದಾರೆ.. ಸಚಿವರ ವಿರುದ್ಧ ಪದೇ ಪದೇ ಲೆಟರ್ ಬರೆದು, ಜೋಡೆತ್ತು ಸರ್ಕಾರದ ಮಾನ ಹರಾಜು ಹಾಕಿದ್ದಾರೆ.. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆದ್ರೆ ರಾಜೀನಾಮೆ ಕೊಡೋಕೂ ಸಿದ್ದ ಎಂದು ಸವಾಲ್ ಎಸೆದಿದ್ದಾರೆ. ಸೀನಿಯರ್ ಎಂಎಲ್ ದ ರೆಬೆಲ್ ಆಗ್ತಿದ್ದಂತೆ, ಸಿದ್ದರಾಮಯ್ಯ ಮನವೊಲಿಕೆಗೆ ಮುಂದಾಗಿದ್ದಾರೆ. ಈ ಕಡೆ ಬಿ.ಆರ್ ಪಾಟೀಲ್ ಲೆಟರ್ ವಿಚಾರವನ್ನ ಮುಂದಿಟ್ಟುಕೊಂಡು, ವಿಪಕ್ಷ ನಾಯಕರು ಸಿಎಂ, ಡಿಸಿಎಂ ಕಿವಿಹಿಂಡುತ್ತಿದ್ದಾರೆ..
ಯೆಸ್.. ಆಳಂದ ಕ್ಷೇತ್ರದಲ್ಲಿ ಕೆಆರ್ ಐಡಿಎಲ್ ನಿಂದ ನಡೆದ ಕಾಮಗಾರಿಗಳ ತನಿಖೆಗೆ ಕಾಂಗ್ರೆಸ್ ಹಿರಿಯ ಶಾಸಕ ಬಿಆರ್ ಪಾಟೀಲ್ ಪಟ್ಟು ಹಿಡಿದಿದ್ದಾರೆ. ಕಳೆದ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿಯೆತ್ತಿದ್ದಕ್ಕೆ, ತಮ್ಮ ವಿರುದ್ದವೇ ಆರೋಪ ಬರೋ ರೀತಿ ಸಚಿವರು ಮಾತನಾಡಿದ್ದಾರೆ. ಕೃಷ್ಣಭೈರೇಗೌಡ ಹಾಗೂ ಅಧಿಕಾರಿಗಳನ್ನ ಕರೆಸಿ ಮಾತಾಡಬೇಕು. ಇಲ್ಲದಿದ್ರೆ ಬೆಳಗಾವಿ ಅಧಿವೇಶನಕ್ಕೆ ಕಾಲಿಡಲ್ಲ ಎಂದು ಸಿಎಂಗೆ ಪತ್ರ ಬರೆದಿದ್ದಾರೆ . ಅಲ್ಲದೇ ಸ್ವಾಭಿಮಾನಕ್ಕೆ ಧಕ್ಕೆ ಆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕೂ ಸಿದ್ದ ಎಂದು ಸವಾಲ್ ಹಾಕಿದ್ದಾರೆ.
ಇನ್ನು ಬಿ.ಆರ್ ಪಾಟೀಲ್ ಹೇಳಿಕೆಗೆ ಸಚಿವ ಕೃಷ್ಣಭೈರೇಗೌಡ ನಯವಾಗಿಯೇ ತಿರುಗೇಟು ಕೊಟ್ಟಿದ್ದಾರೆ. ಅವ್ರು ತಪ್ಪಿತಸ್ಥರು ಅಂತಾ ನಾನು ಹೇಳೇ ಇಲ್ಲ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ರು..
ಬಿ.ಆರ್ ಪಾಟೀಲ್ ಲೆಟರ್ ನಿಂದ ಸರ್ಕಾರಕ್ಕೆ ಮುಜುಗರ ಆಗ್ತಿದ್ದಂತೆ, ಸಿಎಂ ಸಿದ್ದರಾಮಯ್ಯ ಎಚ್ಚೆತ್ತುಕೊಂಡಿದ್ದಾರೆ. ಹಿರಿಯ ಶಾಸಕನ ಅಸಮಧಾನ ಶಮನಕ್ಕೆ ಮುಂದಾಗಿ, ಮಾತುಕತೆಗೆ ಆಹ್ವಾನ ನೀಡಿದ್ದಾರೆ. ಆ ಕಡೆ ಪಾಟೀಲ್ ವಿರುದ್ಧ ಹೈಕಮಾಂಡ್ ಗರಂ ಆಗಿದ್ದು, ಲೆಟರ್ ವಾರ್ ಸಹಿಸಲ್ಲ ಅಂತಾ ಎಚ್ಚರಿಕೆ ನೀಡಿದೆ.. ಈ ವಿಚಾರವಾಗಿ ಬಿ.ಆರ್ ಪಾಟೀಲ್ ಹಾಗೂ ಸಚಿವರ ಜೊತೆ ಮಾತನಾಡೋದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ..
ಬಿ.ಆರ್ ಪಾಟೀಲ್ ಲೆಟರ್ ವಿಚಾರಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಲೇವಡಿ ಮಾಡಿದ್ದಾರೆ. ಇದರಿಂದ ಸರ್ಕಾರ ಸೆಲ್ಫ್ ಸೂಸೈಡ್ ಮಾಡಿಕೊಳ್ಳಬೇಕು. ಈ ಸರ್ಕಾರಕ್ಕೆ ಆ್ಯಕ್ಸಿಡೆಂಡ್ ಅಥವಾ ಹಿಟ್ ವಿಕೆಟ್ ಆಗಬಹುದು ಕಾದು ನೋಡಿ ಅಂತಾ ವ್ಯಂಗ್ಯ ಮಾಡಿದ್ರು.
ಬಿಜೆಪಿ ನಾಯಕರಿಗೂ ಬಿ.ಆರ್ ಪಾಟೀಲ್ ಲೆಟರ್ ಅಸ್ತ್ರವಾಗಿಬಿಟ್ಟಿದೆ. ಕೆಆರ್ ಐಡಿಎಲ್ ಕಾಮಗಾರಿಗಳ ಬಗ್ಗೆ ತನಿಖೆ ಆಗಬೇಕು ಅಂತಾ ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ..
ಶಾಸಕರ ಸಚಿವರ ನಡುವೆ ಯಾವುದೇ ಗೊಂದಲ ಇಲ್ಲ.. ಸ್ವಲ್ಪ ಮಿಸ್ ಕಮ್ಯುನಿಕೇಶನ್ ಆಗಿದೆ ಅಷ್ಟೇ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ..
ಒಟ್ನಲ್ಲಿ ಬಿ.ಆರ್ ಪಾಟೀಲ್ ಲೆಟರ್ ನಿಂದ ಸರ್ಕಾರಕ್ಕೆ ಪದೇ ಪದೇ ಕಂಟಕ ಎದುರಾಗ್ತಿದೆ. ಹಿರಿಯ ಶಾಸಕನ ವಿರುದ್ಧ ಸಚಿವರೂ ಕೂಡ ಗರಂ ಆಗಿ ರಂದ್ರಿಂದ, ಸಂದಾನಕ್ಕೆ ಸಿಎಂ ಎಂಟ್ರಿ ಕೊಟ್ಟಿದ್ದಾರೆ..